Wednesday 6 July, 2011

ನಾಯಿ ಕೊಡೆ


ಇದು ಕೊಡಗಿನಲ್ಲಿ ನಾನು ತೆಗೆದ ಚಿತ್ರಗಳು.. ನಾಯಿ ಕೊಡೆ/Mushroom /ಅಣಬೆ ಏನಾದರು ಕರೆಯಿರಿ..  ಹೇಗಿದೆ?

ನಾಯಿ ಕೊಡೆ.. ಇದನ್ನು ನೋಡಿದಾಗ ನನಗೆ ನನ್ನ ಬಾಲ್ಯದಲ್ಲಿ ಅಮ್ಮನ್ನಿಂದ ಸಿಕ್ಕ ಬಿಸಿ ಬಿಸಿ ಕಜ್ಜಾಯವೇ ನೆನಪಾಗುತ್ತದೆ.. 
ಯಾಕೆ ಬಿದ್ದಿತ್ತು ಏಟು? ನಾನೇನು ಮಾಡಿದ್ದೆ ? ಮುಂದೆ ಓದಿ ನನ್ನ ಕರ್ಮ-ಕಾಂಡವನ್ನ..

ನಾನು ೪ನೇ ತರಗತಿಯಲ್ಲಿ ಓದುತಿದ್ದೆ.. ನನ್ನ ಸೋದರತ್ತೆಯ ಮದುವೆ ಸಂಭ್ರಮ ಮನೆಯಲ್ಲಿ.. ಎಲ್ಲಾ ಸಂಭಂದಿಕರು  ಸೇರಿದ್ದರು , ನಾವು ಮಕ್ಕಳೆಲ್ಲ ಗುಂಪು ಮಾಡಿಕೊಂಡು ಆಟ ಆಡುತ್ತ ಇದ್ವಿ.. ನಾನು ನನ್ನ ತಮ್ಮ ಇಬ್ಬರೇ (ಮಕ್ಕಳ ಪೈಕಿ) ಆಗ ಬೆಂಗಳೂರಲ್ಲಿ ಇದ್ದಿದ್ದು.. ಹೊಸ ಚಿತ್ರಗಳು ಬಂದಿದ್ದು ಹೋದದ್ದು, ಚಿತ್ರ ಗೀತೆಗಳು, ಇವೆಲ್ಲ ವಿಷಯದ ಬಗ್ಗೆ ಹೆಚ್ಚು ತಿಳಿದಿದ್ದು ನನಗೇನೆ.. ನನ್ನ ತಮ್ಮ ಯಾವುದರಲ್ಲೂ ಹೆಚ್ಚು ಮಾತಾಡುತ್ತಿರಲಿಲ್ಲ.. ನಾನೋ ಮಾತಿನ ಮಲ್ಲಿ, dominating ಸ್ವಭಾವ ಬೇರೆ.. (ಗಂಡ ಪಾಪದ ಪ್ರಾಣಿ ಅಂದ್ರಾ?) 

ಛತ್ರಕ್ಕೆ ಹೋದೆವು.. ಊಟ ಮುಗಿಸಿ, ಅಲ್ಲೇ ಸುತ್ತ ಮುತ್ತ beat ಹೊಡೀತಿದ್ವಿ.. ನನ್ನ ಕಣ್ಣಿಗೆ ಪುಟ್ಟ ಪುಟ್ಟ ನಾಯಿ ಕೊಡೆಗಳು ಬಿದ್ದವು.. ಅದನ್ನು ಕಿತ್ತುಕೊಂಡು, ಅದರ ಬಗ್ಗೆ ದೊಡ್ಡ lecture ಬಿಟ್ಟೆ.. ಏನೆಂದು ಹೇಳಿ ನಿಮಗೆ bore ಹೊಡಿಸೋಲ್ಲ ಬಿಡಿ..  Final Punch strong ಇರಬೇಕಲ್ವಾ? ಅದಕ್ಕೆ ನನ್ನ lecture ಅನ್ನು ಒಂದು ಹಾಡಿನಿಂದ ಮುಗಿಸಿದೆ.. ಕನ್ನಡ ಚಿತ್ರರಂಗದಲ್ಲಿ ಈ ಮನೋಹರ ಅಣಬೆ ಮೇಲೆ ಒಂದು ಗೀತೆಯೂ ಇದೆ ಎಂದು ಹಾಡಲು ಶುರು ಮಾಡಿದೆ..

ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ..
ಈ lip ಇಗೆ ನೀ ಬಿಗಿದು ಅಪ್ಪಿ ಕೊಡೆ.. 

ಯಾಕೆ ಈ ಹಾಡು ಹಾಡಿದೆ ಎಂದು ಯೋಚಿಸುತ್ತಿದ್ದೀರಾ? ನಾಯಿ ಮರಿಗೆ ಆಂಗ್ಲದಲ್ಲಿ puppy ಅನ್ನೋಲ್ವಾ? ಪುಟ್ಟ ಪುಟ್ಟ ನಾಯಿ ಕೊಡೆಗೆ ಪಪ್ಪಿ-ಕೊಡೆ ಅಂತಾರೆ ಅನ್ಕೊಂಡೆ.. ತಪ್ಪಾ? ಅಲ್ಲಿ ಇದ್ದೋರೆಲ್ಲ ಕೋಲೆ ಬಸವನ ತರಹ ತಲೆ ಅಲ್ಲಾಡಿಸಿದರು.. ಇಲ್ಲವೇ ಇವಳ ಬಾಯಿಗೆ ಯಾರು ಸಿಕ್ಕಿ ಹಾಕಿಕೊತಾರಪ್ಪ ಅಂತ ತೆಪ್ಪಗೆ ಇದ್ದರು.. 

ನನಗೋ ನನ್ನ wit ಬಗ್ಗೆ ಹೆಮ್ಮೆಯ ಹಮ್ಮು.. ಬೀಗುತ್ತಿದ್ದೆ.. ಮಕ್ಕಳ ಬುದ್ಧಿವಂತಿಕೆಯನ್ನು ತಮ್ಮ ಖುಷಿಯಾಗಿಸಿಕೊಳ್ಳೋ ನನ್ನ ತಾಯಿಯ ಬಳಿ ಹೋದೆ.. ಅವರು ಬೀಗರ ಮನೆಯನ್ನು ಶೃಂಗಾರ ಮಾಡುವುದರಲ್ಲಿ ತೊಡಗಿದ್ದರು.. ನೆಂಟರೆಲ್ಲ ಅಲ್ಲೇ ನೆರೆದಿದ್ದರು.. ನನಗೆ ಇನ್ನಾ ಒಳ್ಳೆ stage ಬೇಕಾ ಬುದ್ಧಿವಂತಿಕೆ ಪ್ರದರ್ಶನಕ್ಕೆ? 
ಅಲ್ಲೇ ಇದ್ದ ಕುರ್ಚಿಯನ್ನೇ ನನ್ನ stage ಮಾಡಿಕೊಂಡೆ.. ಕೈಯಲ್ಲಿ ಇದ್ದ ನಾಯಿ-ಕೊಡೆಯನ್ನು ಫಿಲ್ಮಿ ರೀತಿಯಲ್ಲಿ ಅಲ್ಲಾಡಿಸುತ್ತ ಹಾಡು ಶುರು ಮಾಡಿದೆ.. ನನಗೆ ಹಾಡಿನ ಮೊದಲನೇ ಸಾಲು ಎಷ್ಟು kick ಕೊಟ್ಟಿತ್ತು ಅಂದ್ರೆ.. ಎರಡನೇ ಸಾಲು ಏನು ಇರಬಹುದು ಎಂದು care ಮಾಡಲಿಲ್ಲ..

ಹಾಡು ಕೇಳುತ್ತಿದ್ದಂತೆ ಅಮ್ಮನ ಮುಖ ಕೆಂಪಿಟ್ಟಿತು ನಾಚಿಕೆ/ಅವಮಾನ/ಕೋಪದಿಂದ.. "ಬೇಡ ಕಣೆ.. ನಿಲ್ಲಿಸು..ಇಲ್ಲಾಂದ್ರೆ ನಿನ್ನ ಗ್ರಹಚಾರ ಬಿಡಿಸುತ್ತೀನಿ!" ಎಂದು ಬೆದರಿಸಿದರು.. "ಛೆ.. ಅಮ್ಮ.. ನಿನಗೆ ಅರ್ಥನೇ ಆಗಲಿಲ್ಲ.. ನಾನು ಹೇಳುತ್ತಿರುವುದು.." ಎಂದು ಮತ್ತೆ ಹಾಡಿ ಅರ್ಥೈಸಲು ಬಾಯಿ ಬಿಟ್ಟಿದ್ದೆ.. ಆಮೇಲೆ ಕಣ್ಣಲ್ಲಿ ನೀರು ಬಂದಿದ್ದೊಂದೇ ನೆನಪು..

ಬಹಳ ದಿನ ನನ್ನ ತಾಯಿಗೆ ನನ್ನ ಮಗಳಿನ ಬುದ್ಧಿವಂತಿಕೆ ಅರ್ಥ ಮಾಡಿಕೊಳ್ಳುವ capacity ನೇ ಇಲ್ಲ ಎಂದು ತಿಳಿದಿದ್ದೆ.. ಆಮೇಲೆ ಮಾಸಿ ಹೋಗಿತ್ತು ಈ ಘಟನೆಯ ನೆನಪು.. 

ಈ ನಡವೆ ಯಾವಾಗೋ ಟಿವಿ ನೋಡಬೇಕಾದರೆ "ಕುಂತಿ ಪುತ್ರ" ಎಂಬ ಚಿತ್ರದಲ್ಲಿ ಈ ಹಾಡು ಬಂತು.. ಆಗ ನನ್ನ ಅಮ್ಮ ಯಾಕೆ ನನ್ನ lip ಗೆ ಬಿಗಿದಿದ್ದರು ಎಂದು ಸ್ಪಷ್ಟವಾಯಿತು.. 

11 ಅನಿಸಿಕೆ ಅಭಿಪ್ರಾಯ:

ಗಿರೀಶ್.ಎಸ್ said...
This comment has been removed by the author.
ಗಿರೀಶ್.ಎಸ್ said...

ಸಹನ ಅವರೇ ಫೋಟೋಗ್ರಫಿ ಚೆನ್ನಾಗಿದೆ...ನಿಮ್ಮ ಅಣಬೆ,ಸಾರೀ ನಾಯಿ ಕೊಡೆಯ ಅನುಭವ ತಮಾಷೆ ಆಗಿದೆ....
((ಗಂಡ ಪಾಪದ ಪ್ರಾಣಿ ಅಂದ್ರಾ?) ಇದ್ದರು ಇರಬಹುದು...ಸುಮ್ನೆ ತಮಾಷೆಗೆ ಹೇಳ್ದೆ !!!)

Sahana Rao said...

ಕಲಿತಿದ್ದೀನಿ photography .. ಈ ಹಂತದಲ್ಲಿ ಈ ಮಾತುಗಳು ಖಂಡಿತ ಹುರಿದುಂಬಿಸುತ್ತದೆ.. ತಮಾಷೆ ಆಗಿ ಈಗ ಇದೆ.. ನಿಜ ನಿಜ.. :D ಪಾಪದ ಪ್ರಾಣಿ ಇರಬಹುದೇನೋ.. ನನಗೂ ಗೊತ್ತಿಲ್ಲ.. ಪಾಪ ಅವರು ಅವರ ಕಷ್ಟ ಯಾರ ಹತ್ರ ಹೇಳ್ಕೋ ಬೇಕು.. :D

ಪ್ರವರ ಕೊಟ್ಟೂರು said...
This comment has been removed by the author.
ಪ್ರವರ ಕೊಟ್ಟೂರು said...

nice clickings..... writing style super.....

Sahana Rao said...

@ಪ್ರವರ ಕೆ ವಿ : Thank you! Your appreciation means a lot to me. :)

Ashwini Ajith said...

Sakkat incident and sakkat post. Paapa Aunty's situation.... :) :)

jithendra hindumane said...

ನಿಮ್ಮ ಕವನ ಸಕ್ಕತ್ ಆಗಿದೆ. ಬಾಲ್ಯವೇ ಹಾಗೇ ಆಗಾಗ ಚಪ್ಪರಿಸುವಂತಾದ್ದು ...

Sahana Rao said...

@Ashwini Ajith: Thanks attige.. :)
Paapa nijavaglu.. Amma.. :D

Sahana Rao said...

ನಿಜ.. ಬಾಲ್ಯ ಬಹಳ ಜನಕ್ಕೆ ಖುಷಿಯ ಖಜಾನೆ ಆಗಿರುತ್ತೆ.. ಎಂದಾದರು ನೆನೆದು ಖುಷಿ ಪಡಬಹುದು.. ನನ್ನ ಲೋಕಕ್ಕೆ ಸ್ವಾಗತ.. ಓದಿದಕ್ಕೆ, ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.. :)

ಸೀತಾರಾಮ. ಕೆ. / SITARAM.K said...

:-)