Wednesday 20 July, 2011

ಪುರಾಣ



ಸೀತೆಯನು ಮೆಚ್ಚಿಸಲು ಬಂದ ರಾವಣ,
ತೋರಿಸಿದ ಅವನ ಎಲ್ಲ ಪರಾಕ್ರಮ..
ಜಾನಕಿಯ ಮನದ ತುಂಬಾ ಅವಳ ರಮಣ
ರಾವಣ ಎಂದಿಗೂ ಪರ, ಅಕ್ರಮ

7 ಅನಿಸಿಕೆ ಅಭಿಪ್ರಾಯ:

Prashanth said...

ಸಹನಾ, ಭಾರತೀಯ ನಾರಿಗೆ ತಕ್ಕ ಚುಟುಕವನ್ನೇ ಬರೆದಿದ್ದೀರಿ. ಭೇಷ್! ಆದರೆ, ಇದ್ದಕ್ಕಿದ್ದ ಹಾಗೆ, ರಾವಣ-ಸೀತೆ-ರಾಮ ಇವರೆಡೆಗೆ ನಿಮ್ಮ ಮನಸ್ಸು ಹರಿದಿದ್ದೇಕೋ ತಿಳಿಯಲಿಲ್ಲ.. :o)

ಗಿರೀಶ್.ಎಸ್ said...

ಸೀತೆ ತನ್ನ ಮಗಳೇ ಎನ್ನುವುದು ರಾವಣನಿಗೆ ಗೊತ್ತಿರುವುದಿಲ್ಲ.....ಆಗಾಗಿ ಪರಾಕ್ರಮ ತೋರಿಸುತ್ತಾನೆ...ಇಲ್ಲದೆ ಇದ್ದಾರೆ ಅವಳನ್ನು ಮೆಚ್ಚಿಸುವ ಪ್ರಯತ್ನಕೂ ಕೈ ಹಾಕುತ್ತಿರಲಿಲ್ಲ...

ವಿಭಿನ್ನ ಚುಟುಕು.. ಮುಂದುವರೆಸಿ...

ಪ್ರವರ ಕೊಟ್ಟೂರು said...

ಪದಗಳ ಸ್ವಾರಸ್ಯವೇ ಹಾಗಿದೆ ಅಲ್ವೆ, ಒಂದು ಪದದ ಅರ್ಥ ಬಿಡಿಯಾಗಿದ್ದಾಗಿರುವುದಿಲ್ಲ...

Sahana Rao said...

@ಪ್ರಶಾಂತ: ಧನ್ಯವಾದಗಳು.. ನಮ್ಮ ಭಾರತೀಯತೆಯ ಸೊಗಡೇ ಮನಸಿಗೆ ಖುಷಿ ಕೊಡುತ್ತದೆ.. ಯಾಕೆ ರಾವಣ ಸೀತೆಯತ್ತ ಮನ ಹೋಯಿತು ನಂಗೂ ತಿಳಿದಿಲ್ಲ ಪ್ರಶಾಂತ.. ಆದರೆ ಈ ಚುಟುಕ ನನಗೆ ಖುಷಿ ಅಂತು ನೀಡಿತು..

Sahana Rao said...

@ ಗಿರೀಶ್.ಎಸ್ :ನಿಜ.. ನನಗೂ ಆ ಭಾಗದ ರಾಮಾಯಣದ ಅರಿವಿದೆ.. ನನಗೆ ರಾವಣನ ಬಗ್ಗೆ ಮಹತ್ತರವಾದ ಗುರವವೂ ಇದೆ. ಅವನ ಜೀವನದಲ್ಲಿ ಮಾಡಿದ ಒಂದೇ ತಪ್ಪು 'ಸೀತೆಯ ಅಪಹರಣ'.. ಸಾವಿಗೆ ಒಂದು ಮಾರ್ಗವಾಗಬೇಕಿತ್ತಲ್ಲ.. ವಿಧಿಯ ಆಟ.. ಅರ್ಥವತ್ತಾದ ಅನಿಸಿಕೆ ಹಂಚಿಕೊಂದಿದಕ್ಕೆ ಧನ್ಯವಾದಗಳು..

Sahana Rao said...

@ ಪ್ರವರ ಕೆ ವಿ : ಹೌದು ಪ್ರವರ, ಪದಗಳ ಜೊತೆ ನಾವು ಆಟವಾಡುತ್ತ ಹೋದರೆ ಅದರಲ್ಲಿ ಸಿಗೋ ಖುಷಿನೇ ಬೇರೆ..

ಸೀತಾರಾಮ. ಕೆ. / SITARAM.K said...

nice