Wednesday 29 June, 2011

ಆ ಕೊನೆಯ ಇರುಳು

ನಿರ್ಜನ ಜಾಗದಲಿ, ಕರಾಳ ರಾತ್ರಿಯಲಿ
ಹೊಂಗೆಯ ಮರದಡಿ ಕೂತಳು ಕಮಲಿ..
ಸೂಜಿಯಂತೆ ಚುಚ್ಚುತ್ತಿದ್ದ ಬಿರುಸು ಗಾಳಿ,
ಚರ್ಮವ ಸುಲಿಯುವ ಹಾಗೆ ಮಾಡಿದೆ ಧಾಳಿ..

ಸಂಕಟ, ಅವಮಾನ, ವಿಕಾರ ನೆನಪುಗಳ  ಸವಾರಿ
ದುಃಖ, ಸಂಕಟ, ದುಮ್ಮಾನ ಒತ್ತರಿಸಿ ಬಂತು ಹುಹಾರಿ..
ಬತ್ತಿದೆ ಕಂಬನಿ, ಮುರಿದಿದೆ ಕನಸು,
ಮಣಿಯದು, ದಣಿಯದು, ಕಲ್ಲಾಗಿದೆ ಮನಸು..



ಯಾರಿಗಾಗೋ ಈ ಜೀವನ, ಏತಕ್ಕಾಗಿ ಬದುಕಿರುವೆ ನಾ?
ಉತ್ತರಿಸೆಲೇ ಚಂದಾಮಾಮ, ನಿರೀಕ್ಷಿಸಿದೆ ಈ ನಯನ..
ಅವ ಮೋರೆ ನೋಡಲೂ ಬರಲಿಲ್ಲ..
ಗೊತ್ತು.. ನಾ ಯಾರಿಗೂ ಬೇಕಿಲ್ಲ..

ಸಾಕಷ್ಟು ಸವೆದಿದೆ ಪಯಣ..
ತಲುಪಿದೆ ಕೊನೆಯ ನಿಲ್ದಾಣ: ಮಸಣ!


7 ಅನಿಸಿಕೆ ಅಭಿಪ್ರಾಯ:

ಗಿರೀಶ್.ಎಸ್ said...

ಸಾಕಷ್ಟು ಸವೆದಿದೆ ಪಯಣ..
ತಲುಪಿದೆ ಕೊನೆಯ ನಿಲ್ದಾಣ: ಮಸಣ!

really these lines are truthfull....

ಅಶ್ವಿನಿ/ Ashwini said...

ಇಷ್ಟೊಂದು ಜಿಗುಪ್ಸೆ ಏಕೋ ?
ಮನವೆಲ್ಲ ಏಕಾಗಿದೆ ಬಿಕೋ ??
ತಿಳಿಯಲು ಪ್ರಯತ್ನಿಸಿದಾಗ ದೊರೆತ
ಉತ್ತರದಂತಿದೆ ಈ ಕವನ .

ಭಾವಪೂರ್ಣವಾಗಿದೆ ... ಕೊನೆ ಎರಡು ಸಾಲುಗಳಲ್ಲಿದೆ
ಜೀವನದ ಸತ್ಯ..

Sahana Rao said...

@Girish:

Yes. Truth of life. :)

ಪ್ರವರ ಕೊಟ್ಟೂರು said...

ಪ್ರೇಮಿಯ ಮಿಡಿತ ಭಾವಪೂರ್ಣವಾಗಿಯೂ, ಮನಮುಟ್ಟುವಂತೆಯೂ ಮೂಡಿದೆ.... ಓದಿಸಿದ್ದಕ್ಕೆ ಧನ್ಯವಾದಗಳು....

Sahana Rao said...

@Ashwini: Instant Poetry! ಸಕ್ಕತ್! ನಿಜ ಅಶ್ವಿನಿ.. ಆ ಎರಡು ಸಾಲುಗಳು ಜೀವನದ ಕೊನೆಯ ಸತ್ಯ.. ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು..

Sahana Rao said...

@ಪ್ರವರ ಕೆ ವಿ :ಮೊದಲಿಗೆ ನಿಮಗೆ ನನ್ನ ಪುಟ್ಟ ಅಂಗಳಕ್ಕೆ ಸ್ವಾಗತ.. ನಿಮ್ಮ ಅಭಿಪ್ರಾಯ ನನ್ನ ಬರಹಕ್ಕೆ ಸ್ಫೂರ್ತಿ ನೀಡಿದೆ.. ಧನ್ಯವಾದಗಳು..

ಸೀತಾರಾಮ. ಕೆ. / SITARAM.K said...

ತೀವ್ರ ನಿರಾಶೆಯ ಹಂತದಲ್ಲಿನ ಕವನ!