Tuesday, 14 June, 2011

ಸೂರ್ಯೋದಯ


 ದೂರದ ದಿಗಂತದಲಿ ನೇಸರನು ಹುಟ್ಟಿ,

ಬೆಳಗ್ಯಾನು ಮನಸನು ಹೃದಯಾಂತರಾಳವನು ಮುಟ್ಟಿ..

ಬಳೆದನು ಹೊಂಬಣ್ಣವನು ಅಂಬರಕೆ ಉದಯಿಸೋ ಮುನ್ನ..

ತಂದಾನು ಹೂನಗೆಯನು; ಅಳಿಸಿ ಅಳುವನ್ನ..


19 ಅನಿಸಿಕೆ ಅಭಿಪ್ರಾಯ:

Prashanth said...

ನೀವು ಬಳಸಿರುವ ಪದಗಳು ಅದ್ಭುತವಾಗಿವೆ, ಸಹನಾ. ನಾಲ್ಕೇ ಸಾಲಿನ ಪದ್ಯವಾದರೂ, ನೂರಾರು ಭಾವಾರ್ಥಗಳನ್ನು ಓದುಗರ ಮನಸ್ಸಿನಲ್ಲಿ ಮೂಡಿಸುವಂತಿದೆ :o)

Spicy Sweet said...

ಧನ್ಯವಾದಗಳು ಪ್ರಶಾಂತ. ನನ್ನ ಬರಹದಿಂದ ಯೋಚನಾ ಲಹರಿಯ ಅಲೆ ಶುರು ಆಗುವಂತಿದ್ದರೆ ಅಷ್ಟು ಸಾಕು. ನಾನು ಧನ್ಯೆ! ನಿಮ್ಮ ಪ್ರೋತ್ಸಾಹವಿರಲಿ..

Sharada said...
This comment has been removed by the author.
Sharada said...

ಆಹಾ! ಎಂಥ ಅದ್ಭುತ ದೃಶ್ಯ! ಎಂಥ ಸುಂದರ ಪದಪುಂಜ! "ನೇಸರ" ಎಂಬ ಪದವನ್ನು ಕೇಳಿ ಎಷ್ಟು ಆನಂದವಾಯಿತು. ದಿನಾ ಬೆಳಿಗ್ಗೆ ಆಫಿಸ್ ಗೆ ಬಂದ ಕೂಡಲೇ ಇಂಥ ಒಂದು ಕವನ ಓದಿಬಿಟ್ಟರೆ ದಿನವೆಲ್ಲ ಸಾರ್ಥಕವಾಗುತ್ತದೆ! "ತೇರಾನೇರಿ ಅಂಬರದಾಗೆ ನೇಸರ ನಗುತಾನೆ..." ಎಂದು "ಪರಸಂಗದ ಗೆಂಡೆತಿಮ್ಮ" ಚಿತ್ರದಲ್ಲಿ ಲೋಕೇಶ್ ಹಾಡುವುದು ನೆನಪಾಯಿತು.

Your blogs not just make a good-read but they are also presented very well.

Spicy Sweet said...

ಧನ್ಯವಾದಗಳು ಶಾರದಾ.. ನಿಮ್ಮ ಬೆನ್ನು ತಟ್ಟುವಿಕೆಯಿಂದ, ಪದಗಳು ಮೊಸರಿಂದ ಬೆಣ್ಣೆಯಂತೆ ಬರುವಷ್ಟು ಸುಲಭವಾಗಿ ಬರುತ್ತದೆ.. ನಿಮ್ಮ ಪ್ರೋತ್ಸಾಹವೂ ನನಗೆ ಸ್ಫೂರ್ತಿ..
Articles should be a 'present'able to the reader. He/She will come back to read the writing.

ಗಿರೀಶ್.ಎಸ್ said...
This comment has been removed by the author.
ಗಿರೀಶ್.ಎಸ್ said...

ವಾಹ್ ವಾಹ್ !!! ಶಬ್ದಗಳನ್ನು ಪೋಣಿಸಿರುವ ಶೈಲಿ ತುಂಬ ಇಷ್ಟ ಆಯಿತು...ನಿಮ್ಮ ಸಾಲುಗಳು ಬಹಳ ಭಾವ ಪೂರ್ಣವಾಗಿದೆ..

Spicy Sweet said...

ಗಿರಿಯಿಂದ ಪಯಣ ಬೆಳೆಸಿ ಕನ್ನಡಿಯೊಳಗಿನ ಪ್ರತಿಬಿಂಬ ನೋಡಲು ಬಂದ ಗಿರೀಶ್ ರವರಿಗೆ ಸ್ವಾಗತ.. ಸುಸ್ವಾಗತ.. ಧನ್ಯವಾದಗಳು.. ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ..

A Bumpkin Speaks said...

ನಮ್ಮ ಸಹಪಾಠಿ/ಮಿತ್ರನೊಬ್ಬನ 'ಬ್ಲಾಗ್' ಇಂದ ನಿಮ್ಮ ಆಂಗ್ಲ 'ಬ್ಲಾಗ್' ಅತ್ತ ಶುರುವಾದ ಪಯಣ, ನನ್ನ ಇಲ್ಲಿಗಿದೀಗಲೇ ತಂದಿತು. ಬಹಳ ಚೆನ್ನಾಗಿದೆ, ಜೊತೆಗೆ ಇಲ್ಲಿ ಕನ್ನಡದಲ್ಲೂ ಬರೆಯುವ ನಿಮ್ಮ ಉತ್ಸಾಹ ಮೆಚ್ಚತಕ್ಕದ್ದು.

Spicy Sweet said...

ನಿಮ್ಮನ್ನು ನನ್ನ ಈ ಪುಟ್ಟ ಜಾಗದಲ್ಲಿ ಸಂಧಿಸಿ ಬಹಳನೇ ಸಂತಸವಾಯಿತು.. ನಿಮ್ಮ ಅನಿಸಿಕೆ ಓದಿ ಖುಷಿ ಆಯಿತು.. ನಮ್ಮ ಭಾಷೆಯನ್ನು ನಾವು ಸರಿಯಾಗಿ ಬಳಸದಿದ್ದರೆ ಮತ್ತೆ ಇನ್ಯಾರು ಬಳಸುತ್ತಾರೆ ಹೇಳಿ?

A Bumpkin Speaks said...

ಹೀಗೊಂದಿರಲಿ: ಬರೀ (ಈ) ಮಾತುಗಳಲ್ಲಿ ನಾನ್ಯಾರು ಎಂದು ಕಂಡುಹಿಡಿಯಬಲ್ಲಿರಾ?

Spicy Sweet said...

PUN ಚನ್ನಾಗಿತ್ತು.. ಬುದ್ಧಿವಂತರು ಅಂತ ಗೊತ್ತಾಯ್ತು.. ವಿಜಯ ಪ್ರೌಢ ಶಾಲೆಯಲ್ಲಿ ನಿಮ್ಮ ವ್ಯಾಸಂಗ ನಡೆದಿರಬಹುದು.. ಆ ತೊಂಬತ್ತಾರು ಜನದಲ್ಲಿ ನೀವ್ಯಾರು.. ನೀವು ಹುಡುಗ ಎಂದು ಕೂಡ ಹೇಳಬಹುದು.. ಆಗ ೪೩ ಕ್ಕೆ ಇಳಿಯತ್ತೆ ನನ್ನ ಆಯ್ಕೆಗಳ ಸಂಖ್ಯೆ.. ಬರಿ ಮಾತುಗಳಿಂದ ಮಾತ್ರ ಪಾತ್ರ ಹುಡುಕೋದು ಕಷ್ಟ ಅಲ್ವಾ?

A Bumpkin Speaks said...

(ನಿಜಾಂಶಗಳ ಕುರಿತು ಚರ್ಚೆ ಅನಗತ್ಯ ಅಲ್ವಾ?) ಆದರೆ ಬುದ್ಧಿವಂತ/ತೆ ಅಂತ ತಪ್ಪು ಭಾವಿಸಿರುವಿರಿ ಎಂದು ಹೇಳಿದರೆ ತಪ್ಪಾಗಲಾರದೇನೋ! ಬರೀ ಮಾತುಗಳಲ್ಲಲ್ಲ, ಪ್ರಶ್ನೆಗಳ - ಸುಳಿವುಗಳ ಮೂಲಕ ಏನಾದರೂ ಕಂಡುಹಿಡಿಯಲು ಸಾಧ್ಯವಾಗೋಹಾಗಿದ್ದರೆ ಹೇಳಿ ನೋಡೋಣ!

Prashanth said...

ವಿಜಯ ಪ್ರೌಢ ಶಾಲೆ! ಹೆಸರನ್ನು ಕೇಳಿದ ಕೂಡಲೇ ಮನಸ್ಸು ಬಾಲ್ಯದ ಸವಿನೆನಪುಗಳಿಗೆ ಜಾರಿಕೊಂಡಿತು.
ನಾನೂ ಸಹ ಆ ಶಾಲೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ :o)

Spicy Sweet said...

ನಾನು ಎಷ್ಟೋ ಯೋಚಿಸಿದೆ.. ಯಾರಿರಬಹುದು ಎಂದು.. ನನ್ನ ತಲೆಯಂತೂ ಜಡ್ಡು ಹಿಡಿದು ಹೋಗಿದೆ.. ಏನೂ OUTPUT ಬರಲೇ ಇಲ್ಲ.. ಕೊನೆಗೆ ನಿಮ್ಮನ್ನೇ ಕೇಳೋಣ ಅಂತ.. ನಿಮ್ಮ ಅವಾತಾರ ಸಾಕ್ಷಾತ್ಕಾರ ಮಾಡುವಿರ?

Spicy Sweet said...

ಪ್ರಶಾಂತ.. ಇದು ನೋಡಿ ಖುಷಿಯಾಯಿತು.. ನೀವು ವಿಜಯ ಪ್ರೌಢ ಶಾಲೆಯ ವಿದ್ಯಾರ್ಥಿ ಎಂದು.. ನೀವು ಹೇಳೋದು ಖಂಡಿತ ನಿಜ.. ಆ ಶಾಲೆಯ ಹೆಸರು ಕೇಳಿದರೇನೇ ಸಂತಸವಾಗೋತ್ತೆ.. :)
ನನಗೆ ಪಕ್ಕನೆ ನೆನಪಾಗೋದು ಆ ಶಾಲೆಯ ವಾತಾವರಣ, ಶಿಕ್ಷಣ ತತ್ವದ ಬಗ್ಗೆ ಅವರಿಗಿದ್ದ ಕಾಳಜಿ, ಅಲ್ಲಿ ಇದ್ದ ವಿಧ್ಯಾರ್ಥಿಗಳ ಉನ್ನತ ಯೋಚನಾ ಶಕ್ತಿ.. ನನ್ನ ಮೇಲೆ ಬಹಳನೆ ಪ್ರಭಾವ ಬೀರಿದ ದೇಗುಲ ಎನ್ನಬಹುದು..

A Bumpkin Speaks said...

ಗುಂಡಪ್ಪ; ಅನೂಪ್; ಕೇಸರಿ (ಬಣ್ಣ); 'ಮನೆ-ಶಾಲೆ'.
ಕೆಲ-ಸುಳಿವುಗಳು. ಇವೆಲ್ಲದರ ಬಗ್ಗೆ ನೀವೇ ಹೆಚ್ಚು ತಿಳಿದಿರುವಿರಿ ಎಂದು ನನಗೆ ಗೊತ್ತು!

Spicy Sweet said...

'ಅಭಿ'ನಯ 'ನೀತಾ'ಚಾರ ಚೆನ್ನಾಗೆ ತಿಳಿದಿದೆ ನಿಮಗೆ!

A Bumpkin Speaks said...

ಹಾಗೇ ಇರಲಿ!