Wednesday, 17 August, 2011

ತೊದಲು ಮಾತು

ಮಕ್ಕಳ ಮೊದಲ ಮಾತು ತೊದಲು.. ಅದನ್ನ  ಕೇಳಲು  ಬಹಳನೇ ಅಂದ..  
ಬುನ್ನಿ ಮೊದಲ ಭಾರಿ ಅಪ್ಪ ಅಮ್ಮ ಅಂತ ಶಬ್ದ ಪ್ರಯೋಗ ಮಾಡಿದ್ದು ೧೦ ನೇ ತಿಂಗಳಲ್ಲಿ.. 
ಆದರೆ ಅವಾಗ ಆ ಪದಗಳ ಅರ್ಥ ಅವಳಿಗೆ ತಿಳಿದಿರಲಿಲ್ಲ.. 
೧೧ ನೇ ತಿಂಗಳಲ್ಲಿ ಅರ್ಥ ತಿಳಿದು ಶಬ್ಧಗಳ ಪ್ರಯೋಗ ಮಾಡಲು ಶುರು ಮಾಡಿದಳು.. ಆವಾಗಿನಿಂದ ಪ್ರತಿ ನಿತ್ಯ ಏನೋ ಹೊಸದು ಕಲಿಯೋತ್ತೆ ಗುಂಡಮ್ಮ..  
ಸದ್ಯಕ್ಕೆ ನಿತ್ಯ ಬಳಸುವ ಪದಗಳ (ಬಾಣ) ಪ್ರಯೋಗದ ಪಟ್ಟಿ ಮಾಡುತ್ತೇನೆ.. 
 ಎಡ ಭಾಗಕ್ಕೆ ಬಾರೋ ಪದಗಳು ಅವಳ ಪ್ರಯೋಗ - ಬಲಕ್ಕೆ ನಮ್ಮ ಭಾಷೆಯಲ್ಲಿ ಅದರ ಅರ್ಥ

 ನಿತ್ಯ ಬಳಕೆ ವಸ್ತುಗಳ ವಾಸ್ತು


ಬೋತುತುತು - REMOTE 
ಬಾತೆತೆ - ಬಾಚಣಿಗೆ
ಮೋಮ್ - ಫೋನ್
ಬುಗಿ - ಬುಗುರಿ
ಕೂ - ಶೂ
ತೋತ - ಲೋಟ
ಪೂನ್ - Spoon
 ತುತ್ತು - ಜುಟ್ಟು (ಜುಟ್ಟನು ಹಾಕುವ Band )
ಬದೆ - ಬಲೆ
ಓಯೇ - ಓಲೆ
ಬತೆತ್ - Bucket 
ಕಾಕು - ಕಾಸು/ಕಾಳು
 ಮನೆ - ಮಳೆ

 ಮೈಗೂ ಸೈ

ಒತ್ತೆ - ಹೊಟ್ಟೆ
ಮೂಗು - ಮೂಗು
ಕಣ್ಣು - ಕಣ್ಣು
ಕಿವಿ - ಕಿವಿ
ತಯೇ - ತಲೆ 
ಕಾಆ - ಕಾಲು
ಕೈ - ಕೈ

ಆಹಾರದ ವ್ಯವಹಾರ 

ದೋತೆ - ದೋಸೆ
ಬಿತ್ತಿ - ಬಿಚ್ಚಿ (Biscuit)
ಕಾಕೇಕ್ - ಚಾಕಲೇಟ್
 ಗೀಯ - ಜೀಯ (ನೀರು ಮಕ್ಕಳಿಗೆ ಬಳಸುವ ಪದ)
ಯಾಯಾ - ಲಾಲ (ಹಾಲು ಮಕ್ಕಳಿಗೆ ಬಳಸುವ ಪದ )
ತತಾಪಿ - ಚಪಾತಿ

 ಪರಿ 'ಸ್ತಿತಿ'

ಆತೆ - ಆಚೆ
ಮೇಏ- ಮೇಲೆ
ಕೇಗೆ - ಕೆಳಗೆ

 ಕ್ರಿಯೆ ಪದದ ಮಾಯೆ

ಕೂತಿ - ಕೂಚಿ (ಕೂರು ಎನ್ನಲು ಮಕ್ಕಳು ಬಳಸುವ ಪದ )
ನಿಂಕೊ - ನಿಂಚೋ (ನಿಲ್ಲು ಎನ್ನಲು ಮಕ್ಕಳು ಬಳಸುವ ಪದ)
ಮೊಂಮೊಂ -  ಮೊಂಮೊಂ (ಊಟ)
 ಕೊವು - ಕೊಡು
ಎತ್ತೋ - ಎತ್ತಿಗೋ
 ಗೋಗೋ ತಾಕಿ - ಜೋ ಜೋ ಲಾಲಿ (ಹಾಡು ಎಂದು ಹೇಳಲು)
ತಾಕಿ - ತಾಚಿ (ಮಲಗು ಎನ್ನಲು ಮಕ್ಕಳಿಗೆ ಉಪಯೋಗಿಸುವ ಪದ)
ತಿನ್ನು - ತಿನ್ನು (ತಿನ್ನಲು ಬೇಕು ಎಂದು ಕೇಳುವ ಪರಿ )
ಗೀ ಗೀ - ಜುಯ್ಯ್ ಜುಯ್ಯ್ (ಜೋಕಾಲಿ ಆಡಿಸು ಎಂದು ಕೇಳಲು ಇದನ್ನು ಹೇಳುತ್ತಾಳೆ)
ಹಾಕು - ಹಾಕು


ಹಣ್ಣು-ತರಕಾರಿ ಬೇಕಾ ರೀ?  

ತುತೀನ - ಪುದೀನಾ
ಆಊ - ಆಲೂ  
ಪೋತತೋ - Potato 
ಕಾತೇತ್ - Carrot 
ಮಾವು - ಮಾವು
ಮೆಮಿಂಕಾಯ್ - ಮೆಣಸಿನಕಾಯಿ

 ಹಾಗೆ ಕೆಲವು

ಹಣ್ಣುಕಾಯ್ - ಯಾವುದೇ ಅವಳಿಗೆ ಗೊತ್ತಿರದ ಹಣ್ಣು ತರಕಾರಿ
ನೀನು - ನಾನು (ನಾವು ಅವಳನ್ನು ನೀನು ಎಂದು ಮಾತದಿಸುವುದರಿಂದ ಅವಳು ನೀನು ಎಂದರೆ ನಾನು ಅಂದ್ಕೊಂಡಿದ್ದಾಳೆ)

ಇದು ಬಿಟ್ಟು ಪ್ರಾಣಿ ಪಕ್ಷಿಗಳನ್ನ ಗುರುತಿಸುತ್ತದೆ.. ಅದರ ಕೂಗಿನ ಶಬ್ಧವನ್ನು ಮಾಡುತ್ತದೆ.. ಅದನ್ನು ವೀಡಿಯೊ ಸಮೇತ ಹಾಕುತ್ತೇನೆ..  

14 ಅನಿಸಿಕೆ ಅಭಿಪ್ರಾಯ:

Prashanth said...

ಸಹನಾ, ಬುನ್ನಿ ಮಾಡುವ ಪದಗಳ ಪ್ರಯೋಗಗಳನ್ನು ನೀವು ತುಂಬಾ ಚೆನ್ನಾಗಿ ಬರವಣಿಗೆಗೆ ತಂದಿದ್ದೀರಿ; ಓದಿ ಆನಂದವಾಯ್ತು. ಮುಂಬರುವ ವಿಡಿಯೋಗಾಗಿ ಕಾಯುತ್ತಿರುತ್ತೇನೆ :o)

sush said...

tumbaa chennagidhe blog..i dont know how to type comment in kannada!! nanna magalu sofa helakke fofa helthidlu at age 2!! good post. check out her art blog

Prashanth said...

Sush, please read this article in my Blog written on how to use Kannada online - http://pacchiee.blogspot.com/2010/05/blog-post_23.html

ವಿಚಲಿತ... said...

ಮುದ್ದಾದ ಬರಹ..
ಹೊಸ ರೀತಿಯದು.

_ನನ್ನ ಬ್ಲಾಗಿಗೂ ಬನ್ನಿ: ಚಿಂತನಾ ಕೂಟ

ಅಶ್ವಿನಿ/ Ashwini said...

ಸಕ್ಕತ್ತಾಗಿ ಮಾತಾಡ್ತಾಳೆ ಬುನ್ನಿ. ಮಜಾ ಬಂತು ಓದೋಕ್ಕೆ. ರಿಮೋಟ್ ಗೆ ಬಳಸಿದ ಬೋತುತುತು ನನಗೆ ತುಂಬಾ ಇಷ್ಟವಾಯಿತು. ವೀಡಿಯೊ ಬೇಗ ಪೋಸ್ಟ್ ಮಾಡಿ ಸಹನಾ.

Spicy Sweet said...

ಪ್ರಶಾಂತ, ನಾನು ಸ್ವಲ್ಪವೇ ಬರೆಯೋಕ್ಕೆ ಆಗಿದ್ದು.. ಇನ್ನ ಕೆಲವು ಪದಗಳ ಬಳಕೆ ನನಗೆ ಅರ್ಥವೇ ಆಗುವುದಿಲ್ಲ.. ಅದು ಕೈ, ಕಾಲೆಲ್ಲ ಆಡಿಸಿ ಏನೋ ಹೇಳುತ್ತಿರತ್ತೆ ನಾನು filament ಏ ಇಲ್ಲದ ಬಲ್ಬ್ ತರಹ ಅವಳನ್ನು ನೋಡುತ್ತಿರುತ್ತೀನಿ..
ಆ ವೀಡಿಯೊ ಹಾಕುತ್ತೀನಿ.. ಸ್ವಲ್ಪ ದಿನ ಸಮಯ ಕೊಡಿ..

Spicy Sweet said...

@Sush: ಫೊಫಾ ನ? ಸಕ್ಕತ್! ಏನೇನೋ ಮಾತಾಡೋತ್ತೆ ಮಕ್ಕಳ ನಾಲಿಗೆ.. ಕೇಳೋದೇ ಅಂದ..

ನಿಮ್ಮ ಬ್ಲಾಗ್ ಗೆ ನೆನ್ನೆ ಬಂದಿದ್ದೆ.. ಸಮಯವಾಗಲಿಲ್ಲ ಆರ್ಟ್ ಬ್ಲಾಗ್ ನೋಡೋಕ್ಕೆ.. ಇಂದು ಮತ್ತೆ ಭೇಟಿ ನೀಡಿ ನೋಡುತ್ತೇನೆ..

ನಾನು ಪ್ರಶಾಂತ್ ಇಂದಾನೆ ತಿಳಿದುಕೊಂಡಿದ್ದು ಕನ್ನಡ ಬರವಣಿಗೆ ಹೇಗೆ ಅನ್ನುವುದನ್ನು.. ನಿಮಗೂ ಅವರೇ ಗುರುವಾಗಿದ್ದಾರೆ. :)

ಧನ್ಯವಾದಗಳು ಪ್ರಶಾಂತ..

Spicy Sweet said...

@ವಿಚಲಿತ: ಧನ್ಯವಾದಗಳು ವಿಚಲಿತ.. ಖಂಡಿತ ಬರುತ್ತೇನೆ.. ನಿಮ್ಮ ಬರವಣಿಗೆ ಇಷ್ಟ ಆಯಿತು ನನಗೆ..

ಗಿರೀಶ್.ಎಸ್ said...

makkala todalu nudi eshtu chenda allave?
manasina novannu kuda maresuttade...so sweet of u Bunni !!!

Spicy Sweet said...

@ಅಶ್ವಿನಿ: ಮಾಡುತ್ತೀನಿ ಅಶ್ವಿನಿ.. ಈಗಾಗಲೇ ತೆಗೆದಿರೋ ವೀಡಿಯೊ ಲ್ಲಿ ಅದು ಚಡ್ಡಿ ಹಾಕಿಕೊಂಡಿಲ್ಲ.. ಈಗ ಏನು ಅನ್ನಿಸೋಲ್ಲ, ಪೋಸ್ಟ್ ಮಾಡಿಬಿಡಬಹುದು.. ಮುಂದೆ ನನ್ನ ಬೈತಾಳೆ..

ಬೇರೆ ವೀಡಿಯೊ ತೆಗೆದು ಪೋಸ್ಟ್ ಮಾಡ್ತೀನಿ.. :-D :-D

Spicy Sweet said...

@ಗಿರೀಶ್.ಎಸ್ : ನಿಜ ಗಿರೀಶ! ಎಷ್ಟೇ ದಣಿವಾಗಿದ್ರು, ಏನೇ ಯೋಚನೆ ಇದ್ರೂ ಮಕ್ಕಳ ಜೊತೆ ಇದ್ದಾರೆ ಸಾಕು ಮನಸು ಪುಕ್ಕದ ತೂಕವಾಗುತ್ತದೆ.. :)

ಗಿರೀಶ್.ಎಸ್ said...

how old is Bunni now ????

Spicy Sweet said...

ಗಿರೀಶ್.ಎಸ್: 17th month. You can say 1.5 years roughly..

ಸೀತಾರಾಮ. ಕೆ. / SITARAM.K said...

chennagide..
ನನ್ನ ೧೦ ತಿಂಗಳ ಮಗ ಇಗ ಬಾಪಾ ಬಾಮಾ ಬಾಬಾಬಾ ಮಾಮಾ ದು ದು ಅಂಥಾ ಇದ್ದಾನೆ...