Monday 18 July, 2011

ವಿರಹದ ಬೇಗೆ

 ವಾರ  ದಿನ ಕಳೆದಿತ್ತು.. ಅವಳು ಅವನಿಗೆ sms ರವಾನಿಸೇ ಇರಲಿಲ್ಲ.. ಯಾಕೆ ಹೀಗೆ ಮಾಡಿದೆ ಅವಳು?  

ಏನಾಗಿತ್ತು  ವಾರ  ದಿನದ ಹಿಂದೆ?
ಯಾರೋ ಪುಟಗೋಸಿ "good-friend" ಅಂತ ಹೇಳಿಕೊಳ್ಳುವವನು ಅವಳ ಬಾಳ ಹಾದಿಯಲ್ಲಿ ವಕ್ಕರಿಸಿದ್ದ.. ಆ ಆಸಾಮಿಯೋ ಸಿಕ್ಕಾಪಟ್ಟೆ possessive ಆಗಿದ್ದ ಅವಳ ಬಗ್ಗೆ .. ಅವಳ ಗೆಳೆತನ ಅರಸಿ ಬಂದವರಿಗೆ ಸದಾ ತೆರೆದಿದ್ದ ಅವಳ ಹೃದಯ,  ಹೊಸ ಗೆಳೆತನ ಬೇಡ ಎನಿಸಲಿಲ್ಲ.. ಆದರೆಈ ಗೆಳೆತನ ಅವಳಿಗೆ 'ಎಳೆತಅನ್ನಿಸೋಕ್ಕೆ ಶುರು ಆಗಿತ್ತು..  ಸ್ವಚ್ಚಂದ ಹಕ್ಕಿಯಾಗಿ ಹಾರುತ್ತಿದ್ದ ಮನಸ್ಸನ್ನು ಯಾರೋ ಬಲವಂತವಾಗಿ ಹಿಡಿದು ತನ್ನ ಜೊತೆಯಲ್ಲೇ ಇರಬೇಕು ಎನ್ನುವ ಸ್ವಾರ್ಥದಲ್ಲಿ ಪಂಜರದೊಳಗೆ ಹಾಕಿದ ಹಾಗೆ ಇತ್ತು..   ಪುಟಗೋಸಿ good -friend  "ಬೇರೆ ಯಾವ ಹುಡಗನ ಜೊತೆ ಮಾತಾಡಿದರೆ ನನ್ನ ತಾಯಿ ಮೇಲೆ ಆಣೆ" ಅಂದಿದ್ದ.. ಅವಳಿಗೆ ಅವನದೇ ಧ್ಯಾನ, ಸಂಧಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದಳು..  "ಛೆ..  ಮುನುಷ್ಯ ತಾಯಿಯ ಮೇಲೆ ಯಾಕೆ ಆಣೆ ಹಾಕಿದತನ್ನ  ಮೇಲೆ ಹಾಕಿಕೊಂಡಿದ್ದರೆಸಾಯೋ ಮಗನೆ.. ಯಾವ ಆಣೆನೋ ನಾ ಕಾಣೆ ಅನ್ನಬಹುದಿತ್ತು.. " ಎಂದು ಕೈ-ಕೈ ಹಿಸುಕಿಕೊಂಡಳು..  ಅವಳಿಗೆ ಯಾರನ್ನು hurt ಮಾಡೋದು ಇಷ್ಟ ಇರಲಿಲ್ಲ.. ಹಾಗಂತ ಅವಳಿಗೆ ಜೀವದ ಗೆಳೆಯನ ವಿರಹವೂ ತಡ್ಕೋಳೋದು ಕಷ್ಟವಾಗಿತ್ತು..  "ಅವನಿಗೆ ನಾನು hurt ಮಾಡಿರಬಹುದಲ್ವಾ?" ಎಂದು ಪೇಚಾಡುತ್ತಿದ್ದಳು..

ಈಗ
ಅವಳ ಅಮ್ಮ ಹಾಲು ತಂದು ಕೊಟ್ಟರು.. "ಸ್ವಲ್ಪ ಹೊತ್ತು ವಿರಾಮ ತೊಗೋಳೇ, ಆಮೇಲೆ ಮತ್ತೆ ಓದಲು ಕೂರು" ಎಂದು ಹೇಳಿ ಕೆಳಗೆ ಹೋದರು.. ಅವಳು ಬಾಲ್ಕನಿಯಲ್ಲಿ ನಿಂತು ಬಾನ ಕಡೆ ನೋಡಿದಳು.. ಅದರ ಮುಖವು ಕೋಪದಿಂದ ಕೆನ್ನೆ ಊದಿ, ಕಪ್ಪಿಟ್ಟಿದ್ದವು.. ಅವಳಿಗೆ ಅಪರಾಧಿ ಪ್ರಜ್ಞೆ ಕಾಡ ತೊಡಗಿತು.. "ಅವನು ಏನು ಮಾಡಿದ ಎಂದು ಅವನನ್ನು ದೂರ ಮಾಡಿದೆಅವನಾದರೋ ಏನು ಕೇಳಲಿಲ್ಲ.. ಏನೂ ಹೇಳಲಿಲ್ಲ.. ಸುಮ್ಮನೆ ದೂರ ಸರಿದ.. ಅವನ ಬದುಕಿನಲ್ಲಿ ನನ್ನ ಮೌಲ್ಯ ಇಲ್ಲವಾನನಗೂ ಈಗ ಮುಖವೇ ಇಲ್ಲ ಅವನಿಗೆ ಸಂದೇಶ ಕಳಿಸಲು.. ಅವನು ನನಗೆ ಅವಮಾನ ಮಾಡಿದರೆ? ನೀನು ಯಾರು ಎಂದು ಕೇಳಿದರೆ? " ಕಣ್ಣಲ್ಲಿ ನೀರು ತುಂಬಿತ್ತು.. ಮಣ್ಣಲ್ಲಿ ಮಳೆ ನೀರು ಇಂಗಿತ್ತು.. ಇವಳ ಬಟ್ಟೆಯ ಜೊತೆ ಮನಸು ಭಾರವಾಗಿತ್ತು..

ಬಟ್ಟೆ ಬದಲಿಸಿ, ಮನ ಗಟ್ಟಿ ಮಾಡಿ ಪುಸ್ತಕದ ಮುಂದೆ ಕೂತಳು.. ಸುಮಾರು ಪುಟ ಮುಗಿಸಿದ್ದಳು.. ಎಂದೂ ಓದಿನ ಮಧ್ಯೆ mobile ಮುಟ್ಟದ ಅವಳಿಗೆ, ಒಮ್ಮೆ ನೋಡಿಬಿಡೋ ಚಪಲವಾಯಿತು.. 1 messages received ಎಂದು ಬಂದಿತ್ತು.. "Show " ಒತ್ತಿದೊಡನೆ,
  ಅವಳ ಗುಂಡಿಗೆಯ ಗುಂಡಿ ಎಲ್ಲ ಕಿತ್ತು ಬರುವ ಹಾಗೆ ಬಡ್ಕೋತಿತ್ತು..  ಅವನ ಸಂದೇಶ! ಅದನ್ನು ತೆಗೆಯಲು ಭಯ.. ಕೈ ನಡುಗುತಿತ್ತುಹಣೆಯ ಮುತ್ತುಗಳು ಮೂಡಿದ್ದವು.. ಧೈರ್ಯ ಮಾಡಿ open ಮಾಡೇ ಬಿಟ್ಟಳು..
ಮತ್ತೆ ಮತ್ತೆ ಓದಿದಳು.. 
Saalon baad  naa jaane kya sama hoga......
Hum mein se na jaane kaun kaha hoga......
Phir aise milenge khwabon mein.....
Jaise sukhe gulab milte hai kitaboon mein..

"ಏನ್ ಏನೋ ಅರ್ಥವಾಗುತ್ತಿದೆ.. ಅಥವಾ ಏನ್ಏನೋ ಕಾಣುತ್ತಿದೆಯಅವನೆನಾ ಕಳಿಸಿರೋದು? Back ಒತ್ತಿ ನೋಡಿದಳು.. ಹೌದು.. ಅವನೇ!  ಏನಿದರ ಅರ್ಥ? ಏನೆ ಆಗಲಿ! ನಾನು Reply ಮಾಡೇ ಮಾಡ್ತೀನಿ.. ಆದರೆ..  ಪುಟಗೋಸಿ friend ತಾಯಿಯ ಮೇಲೆ ಆಣೆ?  ಏನು ಮಾಡಲಿ? ತಡವಾಗಿ ಉತ್ತರಿಸಿದರೆ ನಾನು ಅವನನ್ನು ನಿರ್ಲಕ್ಷ್ಯ ಮಾಡುತಿದ್ದೀನಿ ಅಂದು ಕೊಂಡರೆ? ಉತ್ತರ ಆಮೇಲೆ ಹುಡುಕೋಣ" ಇಷ್ಟೆಲ್ಲಾ ಕ್ಷಣಾರ್ಧದಲ್ಲಿ ಯೋಚಿಸಿದ್ದಳು.. Reply ಒತ್ತೆ ಬಿಟ್ಟಳು..
ಏನು ನಮ್ಮನ್ನು ನೆನಪಿಸಿಕೊಂಡುಬಿಟ್ಟಿದ್ದೀರ? ಹೇಗೆ ಇದೆ ಜೀವನ?

Send ಗುಂಡಿ 'ಟಕ್' ಎಂದು ಒತ್ತಿದಾಗ ಸಂದೇಶದ ಜೊತೆ ಮನದ ಭಾರವೂ ಹಾರಿ ಹೋಯಿತು.. ಮುಖದಲ್ಲಿ ನಗು ಮೂಡಿತ್ತು.. "ಬೈಯ್ಯುತ್ತಾನಾ? ಬೈಯ್ಯಲಿ.. ನಾನು ಮಾಡಿರೋ ಕೆಲಸವೂ ಅಂತದ್ದೇ.. ಸದ್ಯ ಪುಣ್ಯಾತ್ಮ Sms ಅನ್ನೋ ಕೊಂಡಿಯನ್ನು ನನ್ನ ಗುಂಡಿಗೆಗೆ ಹಾಕಿದನಲ್ಲ.. ಇನ್ನ ನಾನು ಹೇಗಾದರೂ ಈ ಪುಟಗೋಸಿ friend ಇಂದ ಪಾರಾಗಬಹುದು.." ಎಂದು ಯೋಚಿಸುವುದರಲ್ಲಿ ಮತ್ತೆ sms ಬಂದಿತ್ತು..

ಮರೆತವನು ನಾನಲ್ಲ 

ನೇರ, ದಿಟ್ಟ ಉತ್ತರ ಬಂತು.. "ಇದಕ್ಕೇನೆ ಇಷ್ಟ ಆಗೋದು ನೀನು" ಯೋಚಿಸುವುದರಲ್ಲಿ ನಗೆ,ಹನಿ ಎರಡೂ ಮೂಡಿತ್ತು.. Topic ಬದಲಾಯಿಸಿದಳು..  ಸ್ವಲ್ಪ ಹೊತ್ತು ಕರ್ಣ-ಅರ್ಜುನರ ಬಾಣಗಳ ತರಹ ಪುಂಖಾನುಪುಂಖವಾಗಿ sms ಓಡಾಡಿತು.. 

ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವಾರ್ಷ ಆಯಸ್ಸಂತೆ (ನಮ್ಮ ಸಂಬಂಧಕ್ಕೆ!) ಅಂದುಕೊಂಡಳು.. !

ಆ ಆಣೆಯ ಕಥೆ ಏನಾಯಿತು
ಆ ಪುಟಗೋಸಿ good -friend  ಏನು ಹೇಳಿದಿದ್ದು? "Do not  talk to  any other guy" ಅಂತ ತಾನೇ
ಅವಳು ಮನದಲ್ಲಿ "Get a life bugger! I am talking to my MAN"  ಎಂದು ಗೆಲುವಿನ ನಗೆ ನಕ್ಕಳು.. 

11 ಅನಿಸಿಕೆ ಅಭಿಪ್ರಾಯ:

ಅಶ್ವಿನಿ/ Ashwini said...

ಹ ಹ ಹಾ ! ಮನಸಿನ ಮಾತುಗಳನ್ನು , ಅದರ ಬಡಿತವನ್ನು ಸೂಪರ್ ಆಗಿ ವಿವರಿಸಿದ್ದೀರ. ಆಕೆಯ ಮನದ ಗೊಂದಲ, ಅದರಿಂದ ಹೊರಬಂದ ರೀತಿ ಚೆನ್ನಾಗಿದೆ. ಎಸ್ ಎಂ ಎಸ್ ಯುಗದಲ್ಲಿ ಮನದ ಒದ್ದಾಟ!

Prashanth said...

ಹದಿಹರೆಯದವರ ಮನಸ್ಸಿನಲ್ಲಿ SMS ಗಳು ಸೃಷ್ಟಿಸುವ ತಳಮಳವನ್ನು ಚೆನ್ನಾಗಿ ಬರವಣಿಗೆಗೆ ತಂದಿದ್ದೀರಿ. ಚಿಕ್ಕದೊಂದು ಕಥಾನಕದಲ್ಲಿ ಅನೇಕ ಸೂಕ್ಷ್ಮತೆಗಳನ್ನು ಹೆಣೆದಿರುವುದು ವಿಶೇಷ. ಉತ್ತಮ ಕಲ್ಪನೆ/ಕಥೆ ಸಹನಾ :o)

ಗಿರೀಶ್.ಎಸ್ said...

nice imagination..really some times others possessiveness on us disturbs our mind...

ಪ್ರವರ ಕೊಟ್ಟೂರು said...

ನಿಮ್ಮ ಬರವಣಿಗೆ ಶೈಲಿ ಓದುಗರ ಸೆಳೆತವನ್ನು ಹೆಚ್ಚಿಸುತ್ತೆ..... ಅವಳ ತುಡಿತ ಮುಂದೆ ನಡೆಯುತ್ತಿದೆಯೇನೋ ಎಂಬ ಭಾವನೆ ಬರದೇ ಇರದು...

Swathi Vivek said...

ತುಂಬ ಇಷ್ಟ ಆಯಿತು. Well written <3

Sahana Rao said...

ಅಶ್ವಿನಿ.. ಮನ ಒದ್ದಾಡಲು ಯುಗ ಬೇದವೇ? ಮನಸಿನ ಕಸಿವಿಸಿಯನ್ನ ಒಸಿ ತೋರಿಸೋವ ಅನ್ನೋ ಪ್ರಯತ್ನ.. ಧನ್ಯವಾದಗಳು..:)

Sahana Rao said...

@Prashanth: ಸೂಕ್ಷ್ಮ ಭಾವನೆಗಳೇ ದೊಡ್ಡ ನಿರ್ಣಯಗಳಿಗೆ ಮೂಲ ಎಂಬುವುದು ನನ್ನ ನಂಬಿಕೆ ಪ್ರಶಾಂತ.. ಬರವಣಿಗೆ ಬಗ್ಗೆ ಮೆಚ್ಚಿಗೆ ಸೂಚಿಸಿದ್ದು ಖುಷಿಯಾಯಿತು.. ಧನ್ಯವಾದಗಳು..

Sahana Rao said...

@ ಗಿರೀಶ್.ಎಸ್: Thank you Girish. Possessiveness is a negative feeling. It really suffocates.

Sahana Rao said...

@Tweets: Thankuuu kano.. ನಿಂಗೆ ಇಷ್ಟ ಆದ್ರೆ ನನಗೆ ಎಲ್ಲಿಲ್ಲದ ಖುಷಿ..

Praveen Bhat said...

Tumba chennagide :-).. Loved every bit of it..

ಸೀತಾರಾಮ. ಕೆ. / SITARAM.K said...

ಮನಸ್ಸಿದ್ದಲ್ಲಿ ಮಾರ್ಗ :-)))