Friday 20 May, 2011

ನೀ ಬಂದು ನಿಂತಾಗ

ತಂಪಾದ ಗಾಳಿ ಬೀಸುತ್ತಿದೆ, ಅವನು ಆ ದೇವಸ್ಥಾನದ ಆವರಣವೆಲ್ಲ ಸುತ್ತಾಡುತ್ತಿರುವಾಗ, ಪಕ್ಕ ತಿರುಗಿದವನು ಏನೋ ಕಂಡ ಹಾಗೆ ಆಗಿ ನೋಡಿದ್ದು ಅದೇನಾ? ಎಂದು ತಿರುಗಿ ಮತ್ತೆ ನೋಡುತ್ತಾನೆ.. ಹೌದು.. ಅದೇ.. ಅವಳೇ!!
 ಅವಳು ಮಲಗಿದ್ದಾಳೆ..  
ಅವನು ಹತ್ತಿರ ಬರುತ್ತಾನೆ..ಅವಳ ಮಗುವಿನಂತ ಮುಗ್ದ ಮುಖ ಸ್ಪಷ್ಟವಾಗಿ ಕಾಣತೊಡಗುತ್ತದೆ.. ಅವಳು ಮಲಗಿರುವುದನ್ನೇ ನೋಡುತ್ತಾ ಕೂರುತ್ತಾನೆ.. "ಇಷ್ಟು ಸುಂದರ ಹುಡುಗಿ, ನನ್ನಂತ "ಸುಮಾರು" ಹುಡುಗನನ್ನ ಮೆಚ್ಚಲು ಸಾಧ್ಯವಾ?" "ಛೆ.. ಇಂಥ ಯೋಚನೆ ಬದಿಗಿಡು.. ನಿನ್ನ ಗುರಿ ಏನಿದೆಯೋ ಅದು ನೋಡಿಕೋ" ಎಂದು ಯೋಚಿಸುವುದರೊಳಗೆ ಅವನಿಗೆ ಉತ್ತರ ಬಂದಿತ್ತು ಒಳಗಿನಿಂದ.. "ನೋಡುತ್ತಲೇ ಇದ್ದೀನಲ್ಲ" ಎಂದು..


"ಇಷ್ಟು ಜನ ನೋಡೋ ಜಾಗದಲ್ಲಿ ಇವಳು ಏಕೆ ಮಲಗಿದ್ದಾಳೆ?
 ಯಾರಾದರು ಅಸಭ್ಯವಾಗಿ ವರ್ತಿಸಿದರೆ? 
ಇವಳಿಗೆ ಹೇಗೆ ಹೇಳಲಿ?"  
ಎಂದು ಯೋಚಿಸುವಷ್ಟರಲ್ಲಿ ಒಂದು ನೊಣ ಅವಳ ಕೆಂಪಾದ ಮೃದು ಕೆನ್ನೆಯ ಮೇಲೆ ಜಾರೋ ಬಂಡೆ ಆಡಲು ಶುರು ಮಾಡಿತು..

ಇವನಿಗೋ ಸಹಿಸಲಾರದಷ್ಟು ಕೋಪ ಬಂದಿತ್ತು.. ಕೈಯಲ್ಲಿ ಇದ್ದ ದಿನ ಪತ್ರಿಕೆಯಲ್ಲಿ ಜೋರಾಗಿ ಗಾಳಿ ಬೀಸಿ, ಓಡಿಸಲು ಪ್ರಯತ್ನಿಸಿದ.. ಅದು ಇವನನ್ನು ನೋಡಿ ಗಹಗಹಿಸಿ ನಕ್ಕ ಹಾಗೆ ಆಯಿತು ಅವನಿಗೆ.. ಅದಕ್ಕೆ ಸರಿಯಾಗಿ ಪಾಠ ಕಲಿಸುತ್ತೀನಿ..
ಅವಳು ನನ್ನವಳು ಎಂದು ತೋರಿಸುತ್ತೀನಿ ನಿನಗೆ ಎಂದುಕೊಂಡನು.. ಅವನು ಅವಳ ಕೆನ್ನೆಯ ಹತ್ತಿರ ಬಂದ, ಅವಳ ಉಸಿರು ಅವನ ಉಸಿರು ಸೇರುತ್ತಿತ್ತು, ಅದೇ ಪ್ರೇಮದ ಬಿಸಿಯಲ್ಲಿ ಅವಳ ಕೆನ್ನೆಯ ಮೇಲೆ ಬಿಸಿ ಮುತ್ತನಿತ್ತ.. ಅವಳ ಕೆನ್ನೆಯೆಲ್ಲ ಪ್ರೇಮ ರಸದ ಸ್ವಾದ ಅನುಭವಿಸಿದ ನೀರಿನಂತೆ ಆಗಿತ್ತು..  ನಾಚಿ ಕೆಂಪಾಗಿ, ತುಟಿಯ ಕೊನೆಯಿಂದ ನಕ್ಕು, ಒದ್ದೆಯಾಗಿದ್ದ ಕೆನ್ನೆ ಒರೆಸುತ್ತಾ ಕಣ್ಣು ಬಿಟ್ಟಳು.."ವ್ಯಾಕ್! ಕೆಟ್ಟ ವಾಸನೆ ಬರುತ್ತಿದೆ! ಅವಳ ಕೈ, ಮತ್ತು ಕೆನ್ನೆ ಕಾಗೆ ಪೀಯ ಅಂಟಿತ್ತು.. ಅವನು ಹತ್ತಿರವೂ ಇರಲಿಲ್ಲ.. ಹಾಗಿದ್ದರೆ, ಕಂಡದ್ದೆಲ್ಲ ಕನಸಾ?  ಎಂದು ಅವಳು ಅವಕ್ಕಾದಳು..


ಏನಾಯಿತೆಂದು ನೆನಪಿಸಿಕೊಂಡಳು.. ೨ ತಾಸು ಹಿಂದಿಂದ ನೆನಪಿನ ಸರಮಾಲೆ ಹೀಗಿತ್ತು "ಹಸಿದ ಹೊಟ್ಟೆಗೆ ಬಿಸಿ ಬಿಸಿ ಅನ್ನ ಸಾರು ಬಿದ್ದಿತ್ತು.. ಬಿಸಿಲಿನ ತಾಪಕ್ಕೆ ತನು ಬೆಂದಿತ್ತು.. ಓಡಾಟದಿಂದ ಮೈ ದಣಿದಿತ್ತು.. ಮಲಗಲು ಎಲ್ಲಾದರು ಜಾಗ ಸಿಕ್ಕರೆ ಸಾಕು ಎಂದು ಕಾದಿದ್ದಳು ಅವಳು.. ಅವಳಿದ್ದ ಆವರಣದಲ್ಲೇ ಒಂದು ಮಂಟಪ.. ಆ ಮಂಟಪಕ್ಕೆ ಹೋಗಿ, "ಧಡಕ್ಕನೆ ಮಲಗಿದ್ದಳು .. "

 
ಮುಖ ಮತ್ತೆ ಕೈತೊಳೆದು ಕೊಳ್ಳಲು ಹೋದಾಗ,ಅವನು ಯಾವುದೋ ಮರದಡಿ "ಶಿವಾ" ಅಂತ ಮಲಗಿದ್ದನ್ನು ನೋಡಿದಳು..  

4 ಅನಿಸಿಕೆ ಅಭಿಪ್ರಾಯ:

Prashanth said...

ಸಹನಾ, ಇದೊಂದು ಅದ್ಭುತ ಪರಿಕಲ್ಪನೆ!
ನನ್ನ ಊಹೆಗಳನ್ನೂ ಮೀರಿ ಕೊನೆಗೊಂಡ ಈ ಚಿಕ್ಕ ಕಥಾನಕವು, 'ಕನಸು ಯಾರದೋ ಸ್ವತ್ತಲ್ಲ' ಎಂಬುದನ್ನು ಮನವರಿಕೆ ಮಾಡಿಕೊಟ್ಟು ಮೆಚ್ಚುಗೆಯಾಯಿತು. ಹೀಗೆಯೇ ಬರೆಯುತ್ತಿರಿ :o)

ಅಶ್ವಿನಿ/ Ashwini said...

ಈ ಲೇಖನ ಬಹಳ ಚೆನ್ನಾಗಿ ಮೂಡಿ ಬ೦ದಿದೆ. ನಿಮ್ಮ ಕಲ್ಪನೆ ಅದ್ಭುತ ! ಹೀಗೆ ಬರೆಯುತ್ತಿರಿ ..

Sahana Rao said...

ಪ್ರಶಾಂತ, ಧನ್ಯವಾದಗಳು.. ಕನಸಿಗೆ ಕಡಿವಾಣ ಹಾಕುವವರು ಯಾರು ಇಲ್ಲ.. :) ನೀವು ಹೀಗೆ ಬೆನ್ನು ತಟ್ಟುತ್ತಿದ್ದಾರೆ ಬರೆಯುವ ತವಕ ಹೆಚ್ಚುತ್ತದೆ.

Sahana Rao said...

ಧನ್ಯವಾದಗಳು ಅಶ್ವಿನಿ.. ಕಾಲ್ಪನಿಕ ಲೋಕಕ್ಕೆ ಸ್ವಾಗತ.. ನಿಮ್ಮ ಪ್ರೋತ್ಸಾಹವಿದ್ದರೆ ಖಂಡಿತ ಬರೆಯುತ್ತಿರುತ್ತೀನಿ..