ಗಂಡ ಹೆಂಡರು ಹೊರಟರು ಖರೀದಿಗೆ,
ಬೇಕೆಂದಿದ್ದಳು ಅವಳು ಬಟ್ಟೆಬರೆ.
ಖರೀದಿಯ ನಂತರ ಹೆಂಡತಿಗೆ ಬಟ್ಟೆ,ಗಂಡನಿಗೆ ಬಿಲ್ಲಿನ ಬರೆ!!
Wednesday, 28 September 2011
Monday, 5 September 2011
ಒಂದು ಕ್ಷಣದ ನಿರ್ಲಕ್ಷ್ಯ, ನಷ್ಟವಾಗುವುದು ಲಕ್ಷ
ನನ್ನ 'ಲ್ಯಾಪ್ಟಾಪ್' ನ ಕರುಳ ಬಳ್ಳಿಯ (cord) ಮೈ ಸುಕ್ಕಾಗತೊಡಗಿತು. ಪದೇ ಪದೇ ಮೈ ಬಿಸಿಯಾಗುತ್ತಿತ್ತು , ಆಗ 'ಇಂದು ನೀನೇನು ಕೆಲಸ ಮಾಡಬೇಡ' ಎಂದು ಮಲಗಿಸಿಬಿಡುತಿದ್ದೆ. ಸೂಕ್ಷ್ಮವಾಗಿ ಹೇಳುತ್ತಿತ್ತು.. 'ನಾನು ಸಾಕಷ್ಟು ಸವೆದಿದ್ದೀನಿ, ಬೇರೆ ಯಾರನ್ನಾದರೂ ನೋಡಿಕೋ ಎಂದು ನಿಟ್ಟುಸಿರು ಬಿಡುತ್ತಲೇ ಇತ್ತು.. '
ನನ್ನ ಎಷ್ಟೋ file ಗಳು, ಎಷ್ಟೋ ವರ್ಷದ documents ಗಳು, ಚಿತ್ರಗಳು ಎಲ್ಲ ಆ ಬೃಹದಾಕಾರದ ಲ್ಯಾಪ್ ಟಾಪ್ ದೇಹದಲ್ಲಿ ಹೂತುಹೋಗಿತ್ತು. ಈಗ ಅದನ್ನು ಹೇಗಾದರು ಮಾಡಿ ಮರಣೋತ್ತರ ಪರೀಕ್ಷೆ ಮಾಡಿಸಿ ಆದರೂ ಹೊರ ತೆಗಿಸಬೇಕಿತ್ತು. ನಿಧಿ ಯಾರದೋ ದೇಹದಲ್ಲಿ ಬಚ್ಚಿಟ್ಟು ಅವರು ಸತ್ತ ಹಾಗೆ ಆಯಿತು ನನ್ನ ಪರಿಸ್ಥಿತಿ. ಗೊತ್ತಿರುವವರನ್ನ ಕೇಳಿದೆ.
'ಈಗ ನಿನ್ನ ಪುರಾಣ ಕೇಳುವುದಕ್ಕೆಲ್ಲ ಸಮಯವಿಲ್ಲ, ನನಗೆ ಕಚೇರಿಗೆ ತಡವಾದಾಗ್ಲೆ ನಿನ್ನ ಗೋಳು ಶುರು ಮಾಡುತ್ತೀಯ' ಎಂದು ರೇಗಿದೆ. ನೀನು ಮನೆಗೆ ಬಂದ ಮೇಲೆ ನನ್ನ ಮಾತು ಕೇಳೋಲ್ಲ, ಸುಮ್ನೆ ನನ್ನ ಎಳೆದಾಡಿ, ನನಗೆ ಶಾಕ್ ಕೊಡಿಸುತ್ತೀಯ, ನಿನ್ನ ಲ್ಯಾಪ್ ಟಾಪ್ ನ ಚೇತನ ಜೀವಂತ ಇರಿಸಲು, ಆಮೇಲೆ ಕೇಳೋದೇ ಬೇಡ, ನಿನ್ನ ಬ್ಲಾಗ್, ನಿನ್ನ ಫೇಸ್ ಬುಕ್ , ನಿನ್ನ ಜೀಮೇಲ್, ನನ್ನ ಒದ್ದಾಟ ಕಾಣುವುದೇ ಇಲ್ಲ' ಎಂದು cord ಹೇಳಿಯೂ ಮುಗಿಸಿರಲಿಲ್ಲ.. ನಾನು ಕೋಣೆ ಇಂದ ಹೊರಗೆ ನಡೆದೇ.
ಮನೆಗೆ ಬರುವುದು ೬.೩೦ ಆಗಿತ್ತು. ಅಮ್ಮ ಚಕ್ಕುಲಿ ಮತ್ತೆ ಕಾಫಿ ಕೊಟ್ಟರು, ಚಕ್ಕುಲಿ ಕಟ-ಕಟನೇ ಕಡಿಯುತ್ತಾ, ಲ್ಯಾಪ್ ಟಾಪ್ 'on ' ಮಾಡಿದೆ. 'ON ' ಆಗಲೇ ಇಲ್ಲ! ಇದೇನಪ್ಪ ಆಯಿತು ಎಂದು, 'cord ಅನ್ನು power -socket ಬಾಯಿಗೆ ಇಟ್ಟೆ.. ಅದು ಉಸಿರು ತುಂಬಿ ಜೀವ ಕೊಡುತ್ತದೆ ಎಂದು. ಊಹ್ಞೂ.. ಎನೂ ಆಗಲಿಲ್ಲ.. ಗಾಬರಿಯಾಯಿತು.. ನನ್ನ ಫೋನ್ charger ಹಾಕಿ ಫೋನ್ ಸಿಕ್ಕಿಸಿದೆ, charge ಆಗುತಿತ್ತು.. ಅಂದರೆ ನನ್ನ ಪ್ರೀತಿಯ cord ನ ಉಸಿರು ನಿಂತು ಹೋಯಿತೇ? ಆಗ ಒಳಗಿನ ಮನಸ್ಸು ಕುಪಿತಗೊಂಡಿತು.. ' ಸಾಕು ನಾಟಕ ನಿಂದು, 'ಪ್ರೀತಿಯ' ಅಂತೆ! ನಿನ್ನ ಲ್ಯಾಪ್ ಟಾಪ್ ನೋಡೋಕ್ಕೆ ಆಗೋಲ್ಲ ಎಂದು ನಿನಗೆ ಬೇಸರವಾಗಿದಿಯೇ ಹೊರತು cord ಹೋಯಿತು ಎಂದು ಅಲ್ಲ.
Cord ಜೊತೆ ನಿನ್ನ ಲ್ಯಾಪ್ ಟಾಪ್ ಕೂಡ ಸತ್ತ ಹಾಗೆಯೇ. ' ನಾನು ಮೌನದಿಂದ ತಲೆ ಬಾಗಿದೆ.

ನನ್ನ ಹಳೆಯ Cord ಈಗ ಮಾರುಕಟ್ಟೆಯಲ್ಲೇ ಇಲ್ಲವಂತೆ. ಬೇರೆಯಾವುದು ಇದಕ್ಕೆ ಸರಿ ಹೊಂದುವುದಿಲ್ಲವಂತೆ..
ಸರಿ.. ಯಾವುದೋ ಚೀನೀ ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂದು, ಒಂದು ಭಾನುವಾರವೆಲ್ಲ ಮಳೆ, ಚಳಿ, ಗಾಳಿಯಲ್ಲಿ ಅಲೆದು, ಒಂದು Cord ತಂದೆ. ಅದರಿಂದ ಜೀವ ಏನೋ ಬಂತು, ಆದರೆ ಅದು ಮೊದಲ ಭಾರಿಯೇ ಜ್ವರದಿಂದ ಬಳಳಲು ಶುರು ಮಾಡಿತ್ತು.. ಈ ಭಾರಿ ಹುಷಾರಗಿದ್ದೆ. ನನ್ನ data ಎಲ್ಲ Hard-disk drive ಗೆ ರವಾನಿಸಬಿಟ್ಟೆ. ಮುಂದಿನ ದಿನ ಅದೂ ಅಸುನೀಗಿತ್ತು.
ಒಂದು ಪಾಠವಂತೂ ಕಲೆತೆ. 'ಒಂದು ಕ್ಷಣದ ನಿರ್ಲಕ್ಷ್ಯ, ನಷ್ಟವಾಗುವುದು ಲಕ್ಷ'
Subscribe to:
Posts (Atom)