"ಕೇಳದೆ ನಿಮಗೀಗ ದೂರದಲ್ಲಿ ಯಾರೋ.." ಎಂಬ caller-tune ಬಂತು.. ಆಮೇಲೆ "ನೀವು ಕರೆ ಮಾಡಿದ ಚಂದಾದಾರರು ನಿಮ್ಮ ಕರೆಯನ್ನು ಸ್ವೀಕರಿಸುತ್ತಿಲ್ಲ. ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ".. "ಛೆ.. ಇವಳು ಯಾವಾಗಲೂ ಹೀಗೆ, ಎಲ್ಲೊ phone ಇಟ್ಟು ಮತ್ತೆಲ್ಲೋ ಇರ್ತಾಳೆ.. Cellphone ಇರೋದು ಯಾಕೆ? ತೆಗೆದು ಬಿಸಾಕಲಿ.. ಬೇಕೆಂದಾಗ ಸಿಗದೇ ಹೋದರೆ ಉಪಯೋಗವೇನು? "
ಹೀಗೆ ಎಷ್ಟು ಜನ ಗಂಡಸರು/ಹುಡುಗರು ಹೆಂಗಸರನ್ನ /ಹುಡಗಿಯರನ್ನ ಬೈಕೊಂಡು ಇರೋ ಪ್ರಸಂಗ ಅದೆಷ್ಟು ಇದೆಯೋ?
ಹೆಂಗಸರು ಜೇಬು ಇಲ್ಲದ ಅಂಗಿ ಧರಿಸಿದ್ದರೆ , ಅವರು ಸಾಮಾನ್ಯವಾಗಿ ತಮ್ಮ mobile ನ ತಮ್ಮ ಕೈಯಲ್ಲಿ ಅಥವಾ Handbag ನಲ್ಲಿ ಇಟ್ಟುಕೊಳ್ಳುತ್ತಾರೆ.

ಕಚೇರಿಯಲ್ಲಿ ಇದ್ದರೆ ಪರವಾಗಿಲ್ಲ. Desk ಮೇಲೆ ಇರುತ್ತದೆ. ಎಲ್ಲ ಕರೆಗಳನ್ನು ಸ್ವೀಕರಿಸಬಹುದು. ಯಾವಾಗ ಮೇಲೆ ಹೇಳಿದಂತ ಪರಿಸ್ಥಿತಿ ಆಗಬಹುದು ಎಂದು ಯೋಚಿಸಿದರೆ..
೧) ಮನೆಗೆ ಹೋದಮೇಲೆ, ಕೆಲಸ ಇದ್ದಾಗ ಮೊಬೈಲ್ ಎಲ್ಲೊ, ಅವರು ಎಲ್ಲೊ.. ಹೋದ ಕಡೆಯೆಲ್ಲ ಹಿಡಿದುಕೊಂಡು ಓಡಾಡಲು ತಾಳ್ಮೆ ಇರುವುದಿಲ್ಲವೇನೋ? ಕೈಗಳೆರಡು ಕೆಲಸ ಮಾಡುವ ಭರದಲ್ಲಿ ಇರುತ್ತದೆ, ಮನಸ್ಸು ಅಲ್ಲೇ ಲೀನ ಆಗಿರತ್ತೆ. ಆಗ ಯಾವ ಕರೆ ಬಂತೋ, ಯಾವ 'ಬರೆ' ತಂತೋ.. ಗೊತ್ತಿರೋಲ್ಲ..
೨) ಇನ್ನ ಆಚೆ ಹೋದಾಗ, Handbag ಒಂದು ಕೈಯಲ್ಲಿ, mobile ಒಂದರಲ್ಲಿ ಇಟ್ಕೋಳೋದು ಏನು ಎಂದು mobile ಅನ್ನು bag ನಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಆಮೇಲೆ ಅವರದೇ ಲೋಕ. ಕರೆ ಬಂದರೂ, ಆ ಜನ ಜಂಗುಳಿಯ ಮಧ್ಯೆ traffic ಅಬ್ಬರದ ನಡುವೆ ಏನೂ ಕೇಳದು. ಕರೆ ಮಾಡಿದವರು 'ಕರೆ'ದರು ಕೇಳದೆ... ಎಂದು ತಲೆ ಚೆಚ್ಚಿಕೋಬೇಕು ಅಷ್ಟೇ!
೩) ದ್ವಿಚಕ್ರ ವಾಹನದಲ್ಲಿ ಓಡಾಡುವವರು ಕೆಲವರು, ಡಿಕ್ಕಿಯಲ್ಲಿ ಹಾಕಿ Zoom ಅಂತ ಹೋಗುತಿರುತ್ತಾರೆ. ನಮ್ಮ ರಸ್ತೆಗಳಲ್ಲಿ ಮೈಯೆಲ್ಲ ಕಣ್ಣಾಗಿದ್ರು ಸಾಲದು, ಇಲ್ಲದಿದ್ರೆ ಮಣ್ಣು ಆಗೋದೇ. ಈ ಏಕಾಗ್ರತೆಯಲ್ಲಿ 'ಏಕ್ ಕಾಲ್ ಗ್ರಹಿಸುವುದಿಲ್ಲ'
ಕಾರಣ ಏನೆ ಇರಬಹುದು, ಕೊನೆಗೆ ಕರೆ ಮಾಡಿದವರಿಂದ ಅಂತು ಅವರು ಮರೆ. ಸುಮ್ಮನೆ ಪುಂಗಾಣಿ ಹೊಡೆಯೋಕ್ಕೆ ಕರೆ ಮಾಡಿದ್ದರೆ ಯಾವಗದ್ರು ಮಾತಾಡಬಹುದು. ಆದರೆ ಮುಖ್ಯ ವಿಷಯ ತಿಳಿಸಲು ಕರೆ ಮಾಡಿದ್ದರೆ, ಕರೆ ಮಾಡಿದವರಿಗೆ ನಿಜವಾಗಿಯೂ ತಲೆ ಕೆಡುತ್ತದೆ. ಅವರನ್ನು ತಲುಪುವ ಬಗೆ ಅದೊಂದೇ ಆಗಿದ್ದರಂತೂ ಆಗುವ ಆತಂಕ, ಬರುವ ಕೋಪ ಅಷ್ಟಿಷ್ಟಲ್ಲ.
ಇದೇ ತಪ್ಪು ನನ್ನಿಂದಲೂ ಒಮ್ಮೊಮ್ಮೆ ಆಗುತ್ತದೆ. ನಾನು ಸುಧಾರಿಸಿಕೊಳ್ಳೋ ಪ್ರಯತ್ನದಲ್ಲಿ ಇದ್ದೀನಿ.
ಏನು ಮಾಡಬಹುದಪ್ಪ ನಮ್ಮ ಹುಡುಗಿಯರು/ಹೆಂಗಸರು ಎಂದರೆ,
೧) ಆಚೆ ಹೋದರೆ,ನಿಮ್ಮ ಕೈಯಲ್ಲೇ ಇಟ್ಟುಕೊಳ್ಳಿ ಮೊಬೈಲ್ ನ . ಅದನ್ನು "Vibration with Ringtone " Mode ಇರಲಿ.
೨) ಮನೆಗೆ ಬಂದ ಕೂಡಲೇ "LOUD " Mode ಗೆ ಹಾಕಿ, ಅಡುಗೆ ಮನೆಯಲ್ಲಿ ಇದ್ದರೆ ಅಲ್ಲಿ, ರೂಂ ನಲ್ಲಿ ಇದ್ದರೆ ಅಲ್ಲಿ mobile ಇಟ್ಟುಕೊಳ್ಳುವ ಹವ್ಯಾಸ ಇರಲಿ.
೩) ಸದಾ "Balance " ಇರಲಿ ನಿಮ್ಮ ಮೊಬೈಲ್ ನಲ್ಲಿ.
೪) ಯಾರೋ ಕರೆ ಮಾಡಿ ಅದನ್ನ ನಿಮಗೆ ಸ್ವೀಕರಿಸಲು ಆಗದೆ ಇದ್ದರೆ, ಮತ್ತೆ ಕರೆ ಮಾಡಲು ಮರೆಯಬೇಡಿ.
ನಮ್ಮ ಹುಡುಗರು/ಗಂಡಸರು ಏನಮ್ಮ ಮಾಡಬಹುದು ಅಂದರೆ
೧) ಒಂದು SMS ಕಳುಹಿಸಿರಿ. ಅವರು ಫೋನ್ ನೋಡಿದ ತಕ್ಷಣ ವಿಷಯ ಏನು ಎಂದು ತಿಳಿಯುತ್ತದೆ.
ಮತ್ತೇನು ಮಾಡಬಹುದೋ ನೀವು.. ಪಾಪದ ಪ್ರಾಣಿಗಳು.. ನನಗಂತೂ ತೋರುತ್ತಿಲ್ಲ..
೧) ಒಂದು SMS ಕಳುಹಿಸಿರಿ. ಅವರು ಫೋನ್ ನೋಡಿದ ತಕ್ಷಣ ವಿಷಯ ಏನು ಎಂದು ತಿಳಿಯುತ್ತದೆ.
ಮತ್ತೇನು ಮಾಡಬಹುದೋ ನೀವು.. ಪಾಪದ ಪ್ರಾಣಿಗಳು.. ನನಗಂತೂ ತೋರುತ್ತಿಲ್ಲ..