Tuesday, 30 August 2011
Wednesday, 17 August 2011
ನಿನ್ನ ಮೂಗು ಎಲ್ಲಿ?
ಮೂಗು ತೋರಿಸು ಅಂದ್ರೆ ಹೇಗೆ ತೋರಿಸುತ್ತಿತ್ತು ಎಂದು ನೋಡಿ..
ಈ ವೀಡಿಯೊ ತೆಗೆದಾಗ ಬುನ್ನಿಗೆ ಹನ್ನೊಂದು ತಿಂಗಳು. ಮೂಗನ್ನ ಒಂಬತ್ತನೇ ತಿಂಗಳಿನಿಂದ ತೋರಿಸುತಿತ್ತು.. ಆದರೆ ವೀಡಿಯೊ ತೆಗೆಯಲು ಹೋದರೆ ಮಾತ್ರ ಹೇಳಿದ ಹಾಗೆ ಮಾಡುತ್ತಿರಲಿಲ್ಲ.. ನಮ್ಮ ವೀಡಿಯೊ ತೆಗೆಯುವ ಪ್ರಯತ್ನ ಸಫಲವಾಗಿದ್ದು ಹನ್ನೊಂದನೇ ತಿಂಗಳಲ್ಲೇ.
.
ಈಗ ಮೂಗು ತೋರಿಸು ಅಂದ್ರೆ ಅವಳ ಬೆರಳಲ್ಲಿ ತೋರಿಸುತ್ತೆ.. ಸಮಯ ಹಾರಿ ಹೋಗುತ್ತಿದೆ.. ಎಷ್ಟು ಬೇಗ ದೊಡ್ಡವಳಾಗುತ್ತಿದ್ದಾಳೆ .. ನಂಬಲು ಆಗುತ್ತಿಲ್ಲ..
ತೊದಲು ಮಾತು
ಮಕ್ಕಳ ಮೊದಲ ಮಾತು ತೊದಲು.. ಅದನ್ನ ಕೇಳಲು ಬಹಳನೇ ಅಂದ..
ಬುನ್ನಿ ಮೊದಲ ಭಾರಿ ಅಪ್ಪ ಅಮ್ಮ ಅಂತ ಶಬ್ದ ಪ್ರಯೋಗ ಮಾಡಿದ್ದು ೧೦ ನೇ ತಿಂಗಳಲ್ಲಿ..
ಆದರೆ ಅವಾಗ ಆ ಪದಗಳ ಅರ್ಥ ಅವಳಿಗೆ ತಿಳಿದಿರಲಿಲ್ಲ..
೧೧ ನೇ ತಿಂಗಳಲ್ಲಿ ಅರ್ಥ ತಿಳಿದು ಶಬ್ಧಗಳ ಪ್ರಯೋಗ ಮಾಡಲು ಶುರು ಮಾಡಿದಳು.. ಆವಾಗಿನಿಂದ ಪ್ರತಿ ನಿತ್ಯ ಏನೋ ಹೊಸದು ಕಲಿಯೋತ್ತೆ ಗುಂಡಮ್ಮ..
ಬುನ್ನಿ ಮೊದಲ ಭಾರಿ ಅಪ್ಪ ಅಮ್ಮ ಅಂತ ಶಬ್ದ ಪ್ರಯೋಗ ಮಾಡಿದ್ದು ೧೦ ನೇ ತಿಂಗಳಲ್ಲಿ..
ಆದರೆ ಅವಾಗ ಆ ಪದಗಳ ಅರ್ಥ ಅವಳಿಗೆ ತಿಳಿದಿರಲಿಲ್ಲ..
೧೧ ನೇ ತಿಂಗಳಲ್ಲಿ ಅರ್ಥ ತಿಳಿದು ಶಬ್ಧಗಳ ಪ್ರಯೋಗ ಮಾಡಲು ಶುರು ಮಾಡಿದಳು.. ಆವಾಗಿನಿಂದ ಪ್ರತಿ ನಿತ್ಯ ಏನೋ ಹೊಸದು ಕಲಿಯೋತ್ತೆ ಗುಂಡಮ್ಮ..
ಸದ್ಯಕ್ಕೆ ನಿತ್ಯ ಬಳಸುವ ಪದಗಳ (ಬಾಣ) ಪ್ರಯೋಗದ ಪಟ್ಟಿ ಮಾಡುತ್ತೇನೆ..
ನಿತ್ಯ ಬಳಕೆ ವಸ್ತುಗಳ ವಾಸ್ತು
ಬೋತುತುತು - REMOTE
ಬಾತೆತೆ - ಬಾಚಣಿಗೆ
ಮೋಮ್ - ಫೋನ್
ಬುಗಿ - ಬುಗುರಿ
ಕೂ - ಶೂ
ತೋತ - ಲೋಟ
ಪೂನ್ - Spoon
ತುತ್ತು - ಜುಟ್ಟು (ಜುಟ್ಟನು ಹಾಕುವ Band )
ಬದೆ - ಬಲೆ
ಓಯೇ - ಓಲೆ
ಬತೆತ್ - Bucket
ಕಾಕು - ಕಾಸು/ಕಾಳು
ಮನೆ - ಮಳೆ
ಮೈಗೂ ಸೈ
ಒತ್ತೆ - ಹೊಟ್ಟೆ
ಮೂಗು - ಮೂಗು
ಕಣ್ಣು - ಕಣ್ಣು
ಕಿವಿ - ಕಿವಿ
ತಯೇ - ತಲೆ
ಕಾಆ - ಕಾಲು
ಕೈ - ಕೈ
ಆಹಾರದ ವ್ಯವಹಾರ
ದೋತೆ - ದೋಸೆ
ಬಿತ್ತಿ - ಬಿಚ್ಚಿ (Biscuit)
ಕಾಕೇಕ್ - ಚಾಕಲೇಟ್
ಗೀಯ - ಜೀಯ (ನೀರು ಮಕ್ಕಳಿಗೆ ಬಳಸುವ ಪದ)
ಯಾಯಾ - ಲಾಲ (ಹಾಲು ಮಕ್ಕಳಿಗೆ ಬಳಸುವ ಪದ )
ತತಾಪಿ - ಚಪಾತಿ
ಪರಿ 'ಸ್ತಿತಿ'
ಆತೆ - ಆಚೆ
ಮೇಏ- ಮೇಲೆ
ಕೇಗೆ - ಕೆಳಗೆ
ಕ್ರಿಯೆ ಪದದ ಮಾಯೆ
ಕೂತಿ - ಕೂಚಿ (ಕೂರು ಎನ್ನಲು ಮಕ್ಕಳು ಬಳಸುವ ಪದ )
ನಿಂಕೊ - ನಿಂಚೋ (ನಿಲ್ಲು ಎನ್ನಲು ಮಕ್ಕಳು ಬಳಸುವ ಪದ)
ಮೊಂಮೊಂ - ಮೊಂಮೊಂ (ಊಟ)
ಕೊವು - ಕೊಡು
ಎತ್ತೋ - ಎತ್ತಿಗೋ
ಗೋಗೋ ತಾಕಿ - ಜೋ ಜೋ ಲಾಲಿ (ಹಾಡು ಎಂದು ಹೇಳಲು)
ತಾಕಿ - ತಾಚಿ (ಮಲಗು ಎನ್ನಲು ಮಕ್ಕಳಿಗೆ ಉಪಯೋಗಿಸುವ ಪದ)
ತಿನ್ನು - ತಿನ್ನು (ತಿನ್ನಲು ಬೇಕು ಎಂದು ಕೇಳುವ ಪರಿ )
ಗೀ ಗೀ - ಜುಯ್ಯ್ ಜುಯ್ಯ್ (ಜೋಕಾಲಿ ಆಡಿಸು ಎಂದು ಕೇಳಲು ಇದನ್ನು ಹೇಳುತ್ತಾಳೆ)
ಹಾಕು - ಹಾಕು
ಹಣ್ಣು-ತರಕಾರಿ ಬೇಕಾ ರೀ?
ತುತೀನ - ಪುದೀನಾ
ಆಊ - ಆಲೂ
ಪೋತತೋ - Potato
ಕಾತೇತ್ - Carrot
ಮಾವು - ಮಾವು
ಮೆಮಿಂಕಾಯ್ - ಮೆಣಸಿನಕಾಯಿ
ಹಾಗೆ ಕೆಲವು
ಹಣ್ಣುಕಾಯ್ - ಯಾವುದೇ ಅವಳಿಗೆ ಗೊತ್ತಿರದ ಹಣ್ಣು ತರಕಾರಿ
ನೀನು - ನಾನು (ನಾವು ಅವಳನ್ನು ನೀನು ಎಂದು ಮಾತದಿಸುವುದರಿಂದ ಅವಳು ನೀನು ಎಂದರೆ ನಾನು ಅಂದ್ಕೊಂಡಿದ್ದಾಳೆ)
ಇದು ಬಿಟ್ಟು ಪ್ರಾಣಿ ಪಕ್ಷಿಗಳನ್ನ ಗುರುತಿಸುತ್ತದೆ.. ಅದರ ಕೂಗಿನ ಶಬ್ಧವನ್ನು ಮಾಡುತ್ತದೆ.. ಅದನ್ನು ವೀಡಿಯೊ ಸಮೇತ ಹಾಕುತ್ತೇನೆ.. Friday, 29 July 2011
ಸಾಗುತ ದೂರ ದೂರ
ಅವಳು ದೂರದ ಊರಿಗೆ ಕೆಲಸಕ್ಕಾಗಿ ಹೊರಟು ನಿಂತಿದ್ದಳು. ಅವಳ ತಂದೆ ಅವಳನ್ನು ಬಿಟ್ಟು ಬರಲು ಜೊತೆ ಇದ್ದರು. ರೈಲು ನಿಲ್ದಾಣದಲ್ಲಿ, ಅವನಿಗೆ ಕರೆ ಮಾಡಿದಳು. ಅವನಿಲ್ಲಿ ಅವಳು ಹೊರಡುತ್ತಾಳೆ ಎನ್ನುವ ಯಾವ ಅಂಜಿಕೆ, ಯೋಚನೆ, ಪೇಚಾಟ ಏನೂ ಕಾಣಲಿಲ್ಲ. 'ಹೊರಡುತ್ತಿದ್ದೀನಿ ನಾನು. ಕೊನೆಯದಾಗಿ ಇಷ್ಟು ಹೊತ್ತು ಮಾತನಾಡಲು ಆಗೋದು. ಇನ್ನು ಮುಂದೆ ಅಷ್ಟೊಂದೆಲ್ಲ ಖರ್ಚು ಮಾಡಿಕೊಂಡು ಕರೆ ಮಾಡೋಕ್ಕಾಗೋಲ್ಲ." ಎಂದಳು. ಅವಳ ಕಣ್ಣು ತುಂಬಿ ಬಂದಿತ್ತು. ಹೃದಯ ೧೦ ಕಿಲೋ ಅಕ್ಕಿ ಇರೋ ಮೂಟೆ ಆಗಿತ್ತು.
'ಗೊತ್ತಿರೋ ವಿಷ್ಯ ಅಲ್ವಾ? ಜೀವನ ಬಂದ ಹಾದಿಯಲ್ಲಿ ನಡೆದುಕೊಂಡು ಹೋಗಬೇಕು' ಎಂದು ನಿರ್ಭಾವವಾಗಿ ಹೇಳಿದನು.
ಅವಳಿಗೆ ಅವಳ ಮನಸಿನ ಹಂಬಲ ಗೋಚರಿಸೋ ತೊಡಗಿತ್ತು.. . ಅವನಿಂದ ದೂರ ಹೋಗುತಿದ್ದೀನಿ ಎಂದು ಯೋಚಿಸಿದಾಗೆಲ್ಲ ಹೃದಯ 'ನಾ ನಿನ್ನ ಜೊತೆ ಬರಲಾರೆ' ಎಂದು ಕೀರಲು ಧ್ವನಿಯಲ್ಲಿ ಅಳುತ್ತಿತ್ತು. ಅವಳ ಹೃದಯಕ್ಕೆ ಅವನ ಒಡನಾಟ ಬೇಕಿತ್ತು. ಆದರೆ ಅವನಿಗೆ ಏನೂ ಅನ್ನಿಸೋದೇ ಇಲ್ವಲ್ಲ. ಅವಳ mobile ತೆಗೆದು ಬರೆದಳು
ಬಾಗಿಲು ತೆರೆದಿದೆ, ಕಂಗಳು ಕಾದಿವೆ
ಬರಬೇಕಾದವರು ಬರುವರೇನೋ?
ಮನದ ಕಾವು ತಣಿವುದೇನೋ?
ಅವನ ನೆನಪಲ್ಲೇ ಸವೆದಿದೆ ಜೀವ
ಆ ಸವಿಯಲ್ಲಿ ಮರೆತಿದೆ ನೋವ..
ಒಲವಿನ ಧಾರೆಯು ಬಸಿದು ಹರಿಯುತಿದೆ
ಗುಪ್ತಗಾಮಿನಿಯಾಗಿ ನೆನೆಸಿ, ಮರೆಯಾಗಿದೆ.
ಇದು ಆ ಹೃದಯಕ್ಕೆ ತಿಳಿಯದೆ ಹೋದರೆ?
ಮುನದಲೇ ಚೀರುತಿದೆ ಹೃದಯಾಂತರಾಳದ ಕರೆ
ಬರೆದು ಮುಗಿಸಿದ್ದಳಷ್ಟೇ.. ಅವನ ಕರೆ ಬಂತು.
'ಯಾವ platform ನಲ್ಲಿ ಇದ್ದೀಯ?'
'ಯಾಕೆ? ಇಲ್ಲಿಗೆ ಬಂದಿರೋ ಹಾಗಿದೆ!! ಹೌದಾ?'
'ಕೇಳಿದಕ್ಕೆ ಉತ್ತರಿಸು'
'೫'
'ಸೀದಾ ಬಾ.. Gate ಹತ್ತಿರ'
ಅವಳ ಕಿವಿಯನ್ನ ಅವಳೇ ನಂಬಲಾಗಲಿಲ್ಲ.. ಅವನು ಬಂದಿದ್ದ!! ಅವಳನ್ನ ಬೀಳ್ಕೊಡಲು. ಅವಳ ಅಪ್ಪನಿಗೆ ಇಲ್ಲೇ ನನ್ನ ಗೆಳೆಯರು ಬಂದಿದ್ದಾರೆ, ಹೋಗಿ ಬರುತ್ತೇನೆಂದು ಹೇಳಿ ಓಡಿದಳು.. ಯಾವುದೊ ದೊಡ್ಡ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಅವಳ ಹೆಸರು ಕರೆದಾಗ ಆಗೋ ಅನುಭವ ಅವಳಿಗೆ.. ಅವಳ ಪಾಲಿಗೆ ಅವನೇ 'ಜೀವನ'
ಅವನು ಅವಳನ್ನು ಕಂಡೊಡನೆ ನಕ್ಕ.. ಇವಳಿಗೆ ಹಿಗ್ಗೋ ಹಿಗ್ಗು.. 'ಹುಷಾರಾಗಿ ಹೋಗಿ ಬಾ' ಎಂದ.. ಸರಿ ಎಂದು ತಲೆ ಅಲ್ಲಾಡಿಸಿದಳು.. ಮಾತೇ ಹೊರಡಲಿಲ್ಲ.. !
ಪದೇ ಪದೇ ಪದಗಳು
ಅವಳು-ಅವನು
Wednesday, 20 July 2011
Monday, 18 July 2011
ವಿರಹದ ಬೇಗೆ
೩ ವಾರ ೪ ದಿನ ಕಳೆದಿತ್ತು.. ಅವಳು ಅವನಿಗೆ sms ರವಾನಿಸೇ ಇರಲಿಲ್ಲ.. ಯಾಕೆ ಹೀಗೆ ಮಾಡಿದೆ ಅವಳು?
ಏನಾಗಿತ್ತು ೩ ವಾರ ೪ ದಿನದ ಹಿಂದೆ?
ಯಾರೋ ಪುಟಗೋಸಿ "good-friend" ಅಂತ ಹೇಳಿಕೊಳ್ಳುವವನು ಅವಳ ಬಾಳ ಹಾದಿಯಲ್ಲಿ ವಕ್ಕರಿಸಿದ್ದ.. ಆ ಆಸಾಮಿಯೋ ಸಿಕ್ಕಾಪಟ್ಟೆ possessive ಆಗಿದ್ದ ಅವಳ ಬಗ್ಗೆ .. ಅವಳ ಗೆಳೆತನ ಅರಸಿ ಬಂದವರಿಗೆ ಸದಾ ತೆರೆದಿದ್ದ ಅವಳ ಹೃದಯ, ಈ ಹೊಸ ಗೆಳೆತನ ಬೇಡ ಎನಿಸಲಿಲ್ಲ.. ಆದರೆ, ಈ ಗೆಳೆತನ ಅವಳಿಗೆ 'ಎಳೆತ' ಅನ್ನಿಸೋಕ್ಕೆ ಶುರು ಆಗಿತ್ತು.. ಸ್ವಚ್ಚಂದ ಹಕ್ಕಿಯಾಗಿ ಹಾರುತ್ತಿದ್ದ ಮನಸ್ಸನ್ನು ಯಾರೋ ಬಲವಂತವಾಗಿ ಹಿಡಿದು ತನ್ನ ಜೊತೆಯಲ್ಲೇ ಇರಬೇಕು ಎನ್ನುವ ಸ್ವಾರ್ಥದಲ್ಲಿ ಪಂಜರದೊಳಗೆ ಹಾಕಿದ ಹಾಗೆ ಇತ್ತು.. ಆ ಪುಟಗೋಸಿ good -friend "ಬೇರೆ ಯಾವ ಹುಡಗನ ಜೊತೆ ಮಾತಾಡಿದರೆ ನನ್ನ ತಾಯಿ ಮೇಲೆ ಆಣೆ" ಅಂದಿದ್ದ.. ಅವಳಿಗೆ ಅವನದೇ ಧ್ಯಾನ, ಸಂಧಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದಳು.. "ಛೆ.. ಈ ಮುನುಷ್ಯ ತಾಯಿಯ ಮೇಲೆ ಯಾಕೆ ಆಣೆ ಹಾಕಿದ? ತನ್ನ ಮೇಲೆ ಹಾಕಿಕೊಂಡಿದ್ದರೆ, ಸಾಯೋ ಮಗನೆ.. ಯಾವ ಆಣೆನೋ ನಾ ಕಾಣೆ ಅನ್ನಬಹುದಿತ್ತು.. " ಎಂದು ಕೈ-ಕೈ ಹಿಸುಕಿಕೊಂಡಳು.. ಅವಳಿಗೆ ಯಾರನ್ನು hurt ಮಾಡೋದು ಇಷ್ಟ ಇರಲಿಲ್ಲ.. ಹಾಗಂತ ಅವಳಿಗೆ ಜೀವದ ಗೆಳೆಯನ ವಿರಹವೂ ತಡ್ಕೋಳೋದು ಕಷ್ಟವಾಗಿತ್ತು.. "ಅವನಿಗೆ ನಾನು hurt ಮಾಡಿರಬಹುದಲ್ವಾ?" ಎಂದು ಪೇಚಾಡುತ್ತಿದ್ದಳು..
ಈಗ
ಅವಳ ಅಮ್ಮ ಹಾಲು ತಂದು ಕೊಟ್ಟರು.. "ಸ್ವಲ್ಪ ಹೊತ್ತು ವಿರಾಮ ತೊಗೋಳೇ, ಆಮೇಲೆ ಮತ್ತೆ ಓದಲು ಕೂರು" ಎಂದು ಹೇಳಿ ಕೆಳಗೆ ಹೋದರು.. ಅವಳು ಬಾಲ್ಕನಿಯಲ್ಲಿ ನಿಂತು ಬಾನ ಕಡೆ ನೋಡಿದಳು.. ಅದರ ಮುಖವು ಕೋಪದಿಂದ ಕೆನ್ನೆ ಊದಿ, ಕಪ್ಪಿಟ್ಟಿದ್ದವು.. ಅವಳಿಗೆ ಅಪರಾಧಿ ಪ್ರಜ್ಞೆ ಕಾಡ ತೊಡಗಿತು.. "ಅವನು ಏನು ಮಾಡಿದ ಎಂದು ಅವನನ್ನು ದೂರ ಮಾಡಿದೆ? ಅವನಾದರೋ ಏನು ಕೇಳಲಿಲ್ಲ.. ಏನೂ ಹೇಳಲಿಲ್ಲ.. ಸುಮ್ಮನೆ ದೂರ ಸರಿದ.. ಅವನ ಬದುಕಿನಲ್ಲಿ ನನ್ನ ಮೌಲ್ಯ ಇಲ್ಲವಾ? ನನಗೂ ಈಗ ಮುಖವೇ ಇಲ್ಲ ಅವನಿಗೆ ಸಂದೇಶ ಕಳಿಸಲು.. ಅವನು ನನಗೆ ಅವಮಾನ ಮಾಡಿದರೆ? ನೀನು ಯಾರು ಎಂದು ಕೇಳಿದರೆ? " ಕಣ್ಣಲ್ಲಿ ನೀರು ತುಂಬಿತ್ತು.. ಮಣ್ಣಲ್ಲಿ ಮಳೆ ನೀರು ಇಂಗಿತ್ತು.. ಇವಳ ಬಟ್ಟೆಯ ಜೊತೆ ಮನಸು ಭಾರವಾಗಿತ್ತು..
ಬಟ್ಟೆ ಬದಲಿಸಿ, ಮನ ಗಟ್ಟಿ ಮಾಡಿ ಪುಸ್ತಕದ ಮುಂದೆ ಕೂತಳು.. ಸುಮಾರು ೪ ಪುಟ ಮುಗಿಸಿದ್ದಳು.. ಎಂದೂ ಓದಿನ ಮಧ್ಯೆ mobile ಮುಟ್ಟದ ಅವಳಿಗೆ, ಒಮ್ಮೆ ನೋಡಿಬಿಡೋ ಚಪಲವಾಯಿತು.. 1 messages received ಎಂದು ಬಂದಿತ್ತು.. "Show " ಒತ್ತಿದೊಡನೆ,
ಅವಳ ಗುಂಡಿಗೆಯ ಗುಂಡಿ ಎಲ್ಲ ಕಿತ್ತು ಬರುವ ಹಾಗೆ ಬಡ್ಕೋತಿತ್ತು.. ಅವನ ಸಂದೇಶ! ಅದನ್ನು ತೆಗೆಯಲು ಭಯ.. ಕೈ ನಡುಗುತಿತ್ತು, ಹಣೆಯ ಮುತ್ತುಗಳು ಮೂಡಿದ್ದವು.. ಧೈರ್ಯ ಮಾಡಿ open ಮಾಡೇ ಬಿಟ್ಟಳು..
ಅವಳ ಗುಂಡಿಗೆಯ ಗುಂಡಿ ಎಲ್ಲ ಕಿತ್ತು ಬರುವ ಹಾಗೆ ಬಡ್ಕೋತಿತ್ತು.. ಅವನ ಸಂದೇಶ! ಅದನ್ನು ತೆಗೆಯಲು ಭಯ.. ಕೈ ನಡುಗುತಿತ್ತು, ಹಣೆಯ ಮುತ್ತುಗಳು ಮೂಡಿದ್ದವು.. ಧೈರ್ಯ ಮಾಡಿ open ಮಾಡೇ ಬಿಟ್ಟಳು..
ಮತ್ತೆ ಮತ್ತೆ ಓದಿದಳು..
Saalon baad naa jaane kya sama hoga......
Hum mein se na jaane kaun kaha hoga......
Phir aise milenge khwabon mein.....
Jaise sukhe gulab milte hai kitaboon mein..
"ಏನ್ ಏನೋ ಅರ್ಥವಾಗುತ್ತಿದೆ.. ಅಥವಾ ಏನ್ಏನೋ ಕಾಣುತ್ತಿದೆಯ? ಅವನೆನಾ ಕಳಿಸಿರೋದು? Back ಒತ್ತಿ ನೋಡಿದಳು.. ಹೌದು.. ಅವನೇ! ಏನಿದರ ಅರ್ಥ? ಏನೆ ಆಗಲಿ! ನಾನು Reply ಮಾಡೇ ಮಾಡ್ತೀನಿ.. ಆದರೆ.. ಆ ಪುಟಗೋಸಿ friend ತಾಯಿಯ ಮೇಲೆ ಆಣೆ? ಏನು ಮಾಡಲಿ? ತಡವಾಗಿ ಉತ್ತರಿಸಿದರೆ ನಾನು ಅವನನ್ನು ನಿರ್ಲಕ್ಷ್ಯ ಮಾಡುತಿದ್ದೀನಿ ಅಂದು ಕೊಂಡರೆ? ಉತ್ತರ ಆಮೇಲೆ ಹುಡುಕೋಣ" ಇಷ್ಟೆಲ್ಲಾ ಕ್ಷಣಾರ್ಧದಲ್ಲಿ ಯೋಚಿಸಿದ್ದಳು.. Reply ಒತ್ತೆ ಬಿಟ್ಟಳು..
ಏನು ನಮ್ಮನ್ನು ನೆನಪಿಸಿಕೊಂಡುಬಿಟ್ಟಿದ್ದೀರ? ಹೇಗೆ ಇದೆ ಜೀವನ?
Send ಗುಂಡಿ 'ಟಕ್' ಎಂದು ಒತ್ತಿದಾಗ ಸಂದೇಶದ ಜೊತೆ ಮನದ ಭಾರವೂ ಹಾರಿ ಹೋಯಿತು.. ಮುಖದಲ್ಲಿ ನಗು ಮೂಡಿತ್ತು.. "ಬೈಯ್ಯುತ್ತಾನಾ? ಬೈಯ್ಯಲಿ.. ನಾನು ಮಾಡಿರೋ ಕೆಲಸವೂ ಅಂತದ್ದೇ.. ಸದ್ಯ ಪುಣ್ಯಾತ್ಮ Sms ಅನ್ನೋ ಕೊಂಡಿಯನ್ನು ನನ್ನ ಗುಂಡಿಗೆಗೆ ಹಾಕಿದನಲ್ಲ.. ಇನ್ನ ನಾನು ಹೇಗಾದರೂ ಈ ಪುಟಗೋಸಿ friend ಇಂದ ಪಾರಾಗಬಹುದು.." ಎಂದು ಯೋಚಿಸುವುದರಲ್ಲಿ ಮತ್ತೆ sms ಬಂದಿತ್ತು..
ಮರೆತವನು ನಾನಲ್ಲ
ನೇರ, ದಿಟ್ಟ ಉತ್ತರ ಬಂತು.. "ಇದಕ್ಕೇನೆ ಇಷ್ಟ ಆಗೋದು ನೀನು" ಯೋಚಿಸುವುದರಲ್ಲಿ ನಗೆ,ಹನಿ ಎರಡೂ ಮೂಡಿತ್ತು.. Topic ಬದಲಾಯಿಸಿದಳು.. ಸ್ವಲ್ಪ ಹೊತ್ತು ಕರ್ಣ-ಅರ್ಜುನರ ಬಾಣಗಳ ತರಹ ಪುಂಖಾನುಪುಂಖವಾಗಿ sms ಓಡಾಡಿತು..
ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವಾರ್ಷ ಆಯಸ್ಸಂತೆ (ನಮ್ಮ ಸಂಬಂಧಕ್ಕೆ!) ಅಂದುಕೊಂಡಳು.. !
ಆ ಆಣೆಯ ಕಥೆ ಏನಾಯಿತು?
ಆ ಪುಟಗೋಸಿ good -friend ಏನು ಹೇಳಿದಿದ್ದು? "Do not talk to any other guy" ಅಂತ ತಾನೇ?
ಅವಳು ಮನದಲ್ಲಿ "Get a life bugger! I am talking to my MAN" ಎಂದು ಗೆಲುವಿನ ನಗೆ ನಕ್ಕಳು..
Sunday, 10 July 2011
ರವ ರವ ರವಿವಾರ!
ಭಾನುವಾರವೂ ಮನೆಯ ಸೂರಿಲ್ಲ ಎನಗೆ,ಇದೆಯಂತೆ ಒಂದು ಸಮಾರಂಭ..ಹೋಗಬೇಕು ಭಾಮೆಯ ಮಾಮನ ಮನೆಗೆ,ಇಲ್ಲದಿದ್ದರೆ ಮನೆಯಲ್ಲಿ ಸಮರ ಆರಂಭ..
Subscribe to:
Posts (Atom)


